ಲಾರಿ - ಬೈಕ್ ಡಿಕ್ಕಿ, ಬೈಕ್ ಸವಾರನ ಸಾವು | JANATA NEWS
ಬೆಂಗಳೂರು : ಬೈಕ್ಗೆ ಲಾರಿ ಡಿಕ್ಕಿ ಹೊಡೆದಿರೋ ಘಟನೆ ಗೊಟ್ಟಿಗೆರೆ ಕನಕಪುರ ನೈಸ್ ರಸ್ತೆಯಲ್ಲಿ ನಡೆದಿದೆ.
ಸೊಹಿಲ್ ಬಿಸ್ವಾಸ್ (19) ಸಾವಿಗೀಡಾದ ಯುವಕ. ಮೂಲತಃ ಪಶ್ಚಿಮಬಂಗಾಳದ ಈತ ಬೆಂಗಳೂರಿನಲ್ಲಿ ಕಾಂಕ್ರೀಟ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ.
ಇಂದು ಬೆಳಗ್ಗೆ ಕೆಲಸಕ್ಕೆಂದು ಗೆಳೆಯನ ಜತೆ ಬೈಕ್ನಲ್ಲಿ ಹೊರಟಿದ್ದ ಈತ, ಎಲೆಕ್ಟ್ರಾನಿಕ್ ಸಿಟಿಯಿಂದ ಕನಕಪುರರಸ್ತೆ ಕಡೆಗೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದು ಸೊಹಿಲ್ ಮೇಲೆಯೇ ಹರಿದುಹೋಗಿದೆ.
ಈ ಘಟನೆ ಸಂಬಂಧ ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
English summary :Lorry-bike collision, biker dies