Thu,May02,2024
ಕನ್ನಡ / English

ಎದೆ ಮೇಲೆ ಪ್ರೇಯಸಿಯ ಫೋಟೋ ಹಚ್ಚೆ, ಕೇಕ್ ಕತ್ತರಿಸಿದ ಚಾಕ್‌ನಿಂದಲೇ ಪ್ರೇಯಸಿಯ ಹತ್ಯೆ! | JANATA NEWS

16 Apr 2023
1479

ಬೆಂಗಳೂರು : ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡ್ತಿದ್ದ ಪ್ರಿಯತಮೆಯ ಬರ್ತ್ ಡೇ ಆಚರಣೆಗೆ ಅಂತಾ ಕರೆದುಕೊಂಡು ಬಂದು ಹತ್ಯೆ ಮಾಡಿರುವ ಘಟನೆ ನಡೆದಿದೆ.

ಪ್ರಶಾಂತ್ ಹಾಗು ನವ್ಯ ಪ್ರೇಮಿಗಳಾಗಿದ್ದರು. ದೂರದ ಸಂಬಂಧಿಗಳಾದ ಅವರಿಬ್ಬರ ನಡುವೆ ಅನ್ಯೋನ್ಯ ಬಂಧವಿತ್ತು. ಚಿಕ್ಕ ವಯಸ್ಸಿನಲ್ಲೇ ಮೂಡಿದ ಪ್ರೀತಿಗೆ, ನನಗೆ ನೀನು ನಿನಗೆ ನಾನು ಅಂತ ಕೈ ಕೈ ಹಿಡಿದು ಚೆನ್ನಾಗಿ ಓಡಾಡಿಕೊಂಡಿದ್ರು.. ಮದುವೆಯಾಗೋ ಕನಸು ಕಂಡಿದ್ರು. ಪ್ರಶಾಂತ್, ನವ್ಯಳ ಮೇಲೆ ಪ್ರಾಣವನ್ನೇ ಇಟ್ಕೊಂಡಿದ್ದ. ಎದೆ ಮೇಲೆ ಪ್ರೇಯಸಿಯ ಫೋಟೋ ಹಚ್ಚೆ ಹಾಕಿಸಿಕೊಂಡಿದ್ದ.

ಆದರೆ ಇತ್ತೀಚೆಗೆ ಪ್ರೇಯಸಿಯಲ್ಲಾದ ಕೆಲ ಬದಲಾವಣೆ ಆ ಹುಡುಗನ ತಲೆಯಲ್ಲಿ ಅನುಮಾನದ ಹುಳ ಬಿಟ್ಟಿತ್ತು.

ಇಬ್ಬರ ಪ್ರೀತಿಗೆ ನವ್ಯಾ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದರು. ಪ್ರಶಾಂತ್ ಪದೇ ಪದೇ ಕಿರುಕುಳ‌ ಕೊಡುತ್ತಿದ್ದ ಎಂದು ಇತ್ತೀಚಿಗೆ ಕೋರಮಂಗಲ‌ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಶಾಂತ್ ಸಹ ನಾನು ಇನ್ನು ಮುಂದೆ ಆಕೆಯ ಸಹವಾಸಕ್ಕೆ ಹೋಗುವುದಿಲ್ಲ ಎಂದು ಬರೆದುಕೊಟ್ಟಿದ್ದ.

ಅದಾಗಿಯೂ ಇಬ್ಬರು ಪರಸ್ಪರ ದೂರವಾಗಿರಲಿಲ್ಲ. ಮತ್ತೆ ಮಾತುಕತೆಗೆಂದು ಇಬ್ಬರೂ ಭೇಟಿ ಮಾಡಲಾರಂಭಿಸಿದ್ದರು. ಏಪ್ರಿಲ್ 14ರ ರಾತ್ರಿ ನವ್ಯಾಳ ಬರ್ತ್ ಡೇ ಆಚರಣೆಗೆಂದು ಲಗ್ಗೆರೆಯ ಮನೆಗೆ ಪ್ರಶಾಂತ್ ಆಕೆಯನ್ನು ಆಹ್ವಾನಿಸಿದ್ದಾನೆ.

ಮನೆಯಲ್ಲಿದ್ದಾಗ ನವ್ಯಾ ತನ್ನ ಮೊಬೈಲ್ ಜೊತೆಗೆ ರೆಸ್ಟ್ ರೂಮ್‌ಗೆ ಹೋಗಿದ್ದಾಗ ಪ್ರಶಾಂತ್ ಅನುಮಾನದಿಂದ ಕ್ಯಾತೆ ತೆಗೆದಿದ್ದಾನೆ. ಆಕೆ ಹೊರಬಂದಿದ್ದೇ ತಡ ಮೊಬೈಲ್ ಕೊಡು, ಇಲ್ಲವಾದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಸಿದ್ದ. ಆದರೆ ಅಂತಿಮವಾಗಿ ನವ್ಯಾಳ ಕತ್ತು ಕೊಯ್ದು ಕೊಲೆಗೈದಿದ್ದ.

ಇನ್ನು ನವ್ಯಾ ಕೊಂದು ಐದು ಗಂಟೆ ಮೃತದೇಹದ ಜೊತೆಗೆ ಇದ್ದ ಆರೋಪಿ ಪ್ರಶಾಂತ್ ಕೊಲೆ ಬಳಿಕ ನವ್ಯಾ ಮೃತದೇಹ ಪೀಸ್ ಪೀಸ್ ಮಾಡಿ ಒಂದೊಂದೇ ಭಾಗವನ್ನು ಎಸೆಯುವ ಪ್ಲಾನ್ ಮಾಡಿದ್ದ. ಅಷ್ಟೇ ಅಲ್ಲ ತಾನೂ ಕೂಡ ಆತ್ಮಹತ್ಯೆ ಮಾಡಿಕೊಳ್ಳೋ ಯೋಚನೆ ಮಾಡಿದ್ದ.

ಆದರೆ ಅದ್ಯಾವುದನ್ನೂ ಮಾಡಲು‌ ಧೈರ್ಯ ಸಾಲದೇ ಕೊನೆಗೆ ರಾಜಗೋಪಾಲನಗರ ಠಾಣೆಗೆ ಹೋಗಿ ಶರಣಾಗಿದ್ದಾನೆ ಎಂದು ತನಿಖೆ ವೇಳೆ ಬಯಲಾಗಿದೆ.

RELATED TOPICS:
English summary :Lover photo tattooed on chest, lover killed with cake cutting chalk!

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ರಾಮ್ ಲಲ್ಲಾಗೆ ಪೂಜೆ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ರಾಮ್ ಲಲ್ಲಾಗೆ ಪೂಜೆ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಸೂಪರ್ಸಾನಿಕ್ ಮಿಸೈಲ್-ಅಸಿಸ್ಟೆಡ್ ರಿಲೀಸ್ ಆಫ್ ಟಾರ್ಪಿಡೊ ಹಾರಾಟ-ಪರೀಕ್ಷೆ ಯಶಸ್ವಿ
ಸೂಪರ್ಸಾನಿಕ್ ಮಿಸೈಲ್-ಅಸಿಸ್ಟೆಡ್ ರಿಲೀಸ್ ಆಫ್ ಟಾರ್ಪಿಡೊ ಹಾರಾಟ-ಪರೀಕ್ಷೆ ಯಶಸ್ವಿ
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ, ಕಾಂಗ್ರೆಸ್ ರಾಜ್ಯ ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ? - ಅಮಿತ್ ಷಾ
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ, ಕಾಂಗ್ರೆಸ್ ರಾಜ್ಯ ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ? - ಅಮಿತ್ ಷಾ
ನಮ್ಮ ಮುಸ್ಲಿಂ ಜಾತಿ ಗಣತಿ ಪ್ರಸ್ತಾಪದಿಂದಾಗಿ ಮುಸ್ಲಿಮರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ - ಸಿಎಂ ಹಿಮಂತ ಶರ್ಮಾ
ನಮ್ಮ ಮುಸ್ಲಿಂ ಜಾತಿ ಗಣತಿ ಪ್ರಸ್ತಾಪದಿಂದಾಗಿ ಮುಸ್ಲಿಮರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ - ಸಿಎಂ ಹಿಮಂತ ಶರ್ಮಾ
ಅಂಕೋಲಾ ಬಸ್ ನಿಲ್ದಾಣದ ಹಣ್ಣು ಮಾರಾಟಗಾರ್ತಿ ಮೋಹಿನಿ ಗೌಡ ಭೇಟಿ ಮಾಡಿ ಮಾತನಾಡಿದ ಪ್ರಧಾನಿ ಮೋದಿ
ಅಂಕೋಲಾ ಬಸ್ ನಿಲ್ದಾಣದ ಹಣ್ಣು ಮಾರಾಟಗಾರ್ತಿ ಮೋಹಿನಿ ಗೌಡ ಭೇಟಿ ಮಾಡಿ ಮಾತನಾಡಿದ ಪ್ರಧಾನಿ ಮೋದಿ
ರಾಜರು, ಮಹಾರಾಜರು ಭೂಗಳ್ಳರು ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ ಪ್ರಧಾನಿ ಮೋದಿ
ರಾಜರು, ಮಹಾರಾಜರು ಭೂಗಳ್ಳರು ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ ಪ್ರಧಾನಿ ಮೋದಿ
ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ವಿಚಾರ: ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನ
ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ವಿಚಾರ: ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನ
ನೀವು ರಾಷ್ಟ್ರೀಯತೆಗಿಂತ ಹೆಚ್ಚು ಆದ್ಯತೆ ವೈಯಕ್ತಿಕ ಹಿತಾಸಕ್ತಿಗೆ ಇಟ್ಟುಕೊಂಡಿದ್ದೀರಿ - ದೆಹಲಿ ಹೈಕೋರ್ಟ್ ಎಎಪಿ ಸರ್ಕಾರವನ್ನು ಖಂಡಿಸುತ್ತದೆ
ನೀವು ರಾಷ್ಟ್ರೀಯತೆಗಿಂತ ಹೆಚ್ಚು ಆದ್ಯತೆ ವೈಯಕ್ತಿಕ ಹಿತಾಸಕ್ತಿಗೆ ಇಟ್ಟುಕೊಂಡಿದ್ದೀರಿ - ದೆಹಲಿ ಹೈಕೋರ್ಟ್ ಎಎಪಿ ಸರ್ಕಾರವನ್ನು ಖಂಡಿಸುತ್ತದೆ
ಸಂದೇಶಖಾಲಿಯಲ್ಲಿ ಭಾರಿ ಶಸ್ತ್ರಾಸ್ತ್ರ ವಶ : ಟಿಎಂಸಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲು ಬಿಜೆಪಿ ಆಗ್ರಹ
ಸಂದೇಶಖಾಲಿಯಲ್ಲಿ ಭಾರಿ ಶಸ್ತ್ರಾಸ್ತ್ರ ವಶ : ಟಿಎಂಸಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲು ಬಿಜೆಪಿ ಆಗ್ರಹ
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಿಂದ ಮಸ್ಟರಿಂಗ್ ಕೇಂದ್ರಗಳ ಭೇಟಿ ಹಾಗೂ ಪರಿಶೀಲನೆ
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಿಂದ ಮಸ್ಟರಿಂಗ್ ಕೇಂದ್ರಗಳ ಭೇಟಿ ಹಾಗೂ ಪರಿಶೀಲನೆ
40 ಕೋಟಿ ಜನರ ಬಡತನ ನಿರ್ಮೂಲನೆ, ಅಧಿಕಾರಶಾಹಿ ವ್ಯವಸ್ಥೆ ಮುಗಿಸಲು ಕಠಿಣ ಆಡಳಿತ,  ಮೋದಿ ನಂಬಲಾಗದ ಕೆಲಸ ಮಾಡಿದ್ದಾರೆ - ಜೆಪಿ ಮೋರ್ಗಾನ್ ಸಿಇಒ
40 ಕೋಟಿ ಜನರ ಬಡತನ ನಿರ್ಮೂಲನೆ, ಅಧಿಕಾರಶಾಹಿ ವ್ಯವಸ್ಥೆ ಮುಗಿಸಲು ಕಠಿಣ ಆಡಳಿತ, ಮೋದಿ ನಂಬಲಾಗದ ಕೆಲಸ ಮಾಡಿದ್ದಾರೆ - ಜೆಪಿ ಮೋರ್ಗಾನ್ ಸಿಇಒ
ಪಕ್ಷದ ಚುನಾವಣಾ ಪ್ರಣಾಳಿಕೆ ಪತ್ರ ವನ್ನು ಖುದ್ದಾಗಿ ವಿವರಿಸಲು ಪ್ರಧಾನಿ ಮೋದಿ ಸಮಯ ಕೇಳಿದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ
ಪಕ್ಷದ ಚುನಾವಣಾ ಪ್ರಣಾಳಿಕೆ ಪತ್ರ ವನ್ನು ಖುದ್ದಾಗಿ ವಿವರಿಸಲು ಪ್ರಧಾನಿ ಮೋದಿ ಸಮಯ ಕೇಳಿದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ

ನ್ಯೂಸ್ MORE NEWS...