Fri,May03,2024
ಕನ್ನಡ / English

ಇನ್ನೊಂದೆರಡು ತಿಂಗಳಲ್ಲಿ ಕಾಂಗ್ರೆಸ್ ನವರನ್ನು ಕಂಡರೆ ಟೋಪಿ ಹಾಕಲು ಬಂದಿದ್ದಾರೆ ಎಂದು ಜನ ಭಾವಿಸುತ್ತಾರೆ - ಸಂಸದ ಸಿಂಹ | JANATA NEWS

08 Jun 2023
962

ಬೆಂಗಳೂರು : ಸಿಎಂ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರ್ಕಾರದ ಉಚಿತ ಭಾಗ್ಯಗಳಿಗೆಲ್ಲ ಕಂಡಿಶನ್ ನಿಯಮ ಹೆಚ್ಚಾದಂತೆ ಜನರಲ್ಲಿ ಭಾರಿ ಗೊಂದಲ ವ್ಯಕ್ತವಾಗಿದ್ದು, ವಿರೋಧಪಕ್ಷ ಬಿಜೆಪಿವು ನಿರಂತರವಾಗಿ ಸರ್ಕಾರದ ವಿರುದ್ಧ ಟೀಕೆ ಮಾಡಲು ಮುಂದಾಗಿದೆ.

ಈ ಕುರಿತು ಮಾತನಾಡಿದ ಮೈಸೂರು-ಮಡಿಕೇರಿ ಸಂಸದ ಪ್ರತಾಪ್ ಸಿಂಹ ಅವರು, ಇನ್ನೊಂದೆರಡು ತಿಂಗಳಲ್ಲಿ ಕಾಂಗ್ರೆಸ್ ನವರನ್ನು ಕಂಡರೆ ಟೋಪಿ ಹಾಕಲು ಬಂದಿದ್ದಾರೆ ಎಂದು ಜನ ಭಾವಿಸುತ್ತಾರೆ", ಎಂದು ಲೇವಡಿ ಮಾಡಿದ್ದಾರೆ.

ಈ ಕುರಿತು ಟಿವಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ ಅವರು, ಡಿಕೆ ಶಿವಕುಮಾರ್ ಅವರು ವೇದಿಕೆ ವೇದಿಕೆಗಳಲ್ಲಿ ಉಚಿತ ಕಚಿತ ನಿಶ್ಚಿತ ಕಂಡಿತ ಎನ್ನುತ್ತಿದ್ದರು ಸಿದ್ದರಾಮಯ್ಯನವರು ನನಗೂ ಎರಡು ನೂರು ಯೂನಿಟ್ ಫ್ರೀ ಕಾಕಾ ಪಾಟೀಲ್ ಮಾದೇವ ನಿನಗೂ ಕೂಡ ಶ್ರೀ ಕಣಯ್ಯ ಅಂತಿದ್ರು. ನಾವು ಅನ್ಕೊಂಡಿದ್ವಿ ಪಂಜಾಬ್ ನಲ್ಲಿ ರಾಜಸ್ಥಾನದಲ್ಲಿ ಹಿಮಾಚಲಿನಲ್ಲಿ ಹಾಗೂ ತಮಿಳುನಾಡಿ ಇದೇ ರೀತಿ ಬರವಸೆ ಕೊಟ್ಟು ಟೋಪಿ ಹಾಕಿದ್ದಾರೆ ಅಲ್ವಾ, ಜನ ಇಂಥವರನ್ನೆಲ್ಲ ನಂಬಲ್ಲ ಜನ ಪ್ರಜ್ಞಾವಂತರು ಎಂದು ಭಾವಿಸಿದ್ವಿ. ಆದರೆ ಜನ ಅದೇ ಸುಳ್ಳನ್ನ ನಂಬಿ ಯಾಮಾರಿದ್ದಾರೆ, ಎಂದು ಚುನಾವಣೆ ರಿಸಲ್ಟ್ ಬಂದ್ಮೇಲೆ ಗೊತ್ತಾಯ್ತು.

ನಾವು ಅದೇ ರೀತಿ ಅಂಡರ್ ಎಸ್ಟಿಮೇಟ್ ಮಾಡಿ ಜನ ನಂಬಲ್ಲ ಜನ ಪ್ರಜ್ಞಾವಂತರಾಗಿದ್ದಾರೆ ಎಂದು ನಾವು ಭಾವಿಸಿದ್ವಿ. ಕಾಂಗ್ರೆಸ್ ನವರು ಚುನಾವಣೆ ಸಂದರ್ಭದಲ್ಲಿ ಯಾವ ಕಂಡೀಶನ್ ಕೂಡ ಹೇಳಿಲ್ಲ, ಖಚಿತ ಉಚಿತ ಖಂಡಿತ ಅಂತ ಹೇಳ್ಬಿಟ್ರು ಯಾವುದೇ ಕಂಡೀಶನ್ ಹೇಳಿರಲಿಲ್ಲ ಈಗ ಗೆದ್ದಾದ ಮೇಲೆ ಕಂಡಿಶನ್ ಹೇಳಲು ಶುರು ಮಾಡಿದ್ದಾರೆ.

12 ತಿಂಗಳ ಮೀಟರ್ ಆವರೇಜ್ ತೆಗೆದುಕೊಂಡು ಫ್ರೀ ವಿದ್ಯುತ್ ನೀಡುವುದಾಗಿ ಈಗ ಹೇಳುತ್ತಿದ್ದಾರೆ. ಬೆಂಗಳೂರು ನಗರ ಒಂದನೇ ತೆಗೆದುಕೊಳ್ಳುವುದಾದರೆ 70 ಭಾಗ ಬಾಡಿಗೆದಾರರೇ ಇರುವುದು, ಮಾಲೀಕರ ಹೆಸರಲ್ಲಿ ಮೀಟರ್ ಇರುತ್ತದೆ. ಮೀಟರ್ ಗೆ 200 ಯೂನಿಟ್ ಗಿಂತ ಜಾಸ್ತಿ ಇದ್ದರೆ ಮಾಲೀಕರಿಗೂ ಫ್ರೀ ಸಿಗಲ್ಲ. ಅಂದರೆ ಹೆಚ್ಚು ಕಮ್ಮಿ ಬೆಂಗಳೂರಿನಲ್ಲಿರುವ ಯಾರಿಗೂ ಈ ಭಾಗ್ಯ ಸಿಗುವುದಿಲ್ಲ.

ಇನ್ನೂ, ಗೃಹಲಕ್ಷ್ಮಿ ಯೋಜನೆಯಲ್ಲಿ ಮನೆ ಒಡತಿ ಯಾರು ಎಂದು ನೀವೇ ತೀರ್ಮಾನ ಮಾಡಿ ಎನ್ನುತ್ತಿದ್ದರು. ಈಗ ತೆರಿಗೆ ಕಟ್ಟಿದರೆ ಜಿಎಸ್​ಟಿ ಕಟ್ಟಿದರೆ ಸಿಗುವುದಿಲ್ಲ ಅನ್ನುತ್ತಿದ್ದಾರೆ, ಯಾರಾದರೂ ಸಂಬಳ ತೆಗೆದುಕೊಳ್ಳುವರಿದ್ದರೆ, ಗಳಿಸುವವರಿದ್ದರೆ ಸಿಗುವುದಿಲ್ಲ ಎನ್ನುತ್ತಿದ್ದಾರೆ.

ಇದೇ ರೀತಿ ಯುವ ನಿಧಿ ಕೂಡ ಸ್ವಲ್ಪ ದಿನದಲ್ಲಿ ಗೊತ್ತಾಗುತ್ತದೆ. ಕೋವಿಡ್ ಸಂದರ್ಭದಲ್ಲಿ ಕೆಲಸ ಕಳೆದುಕೊಂಡವರು ಗ್ರಾಜುಯೇಟ್ ಆದವರು ನಮಗೆ 3000(ಯುವನಿಧಿ) ಸಿಗುತ್ತದೆ ಎಂದು ಯಾಮಾರಿದ್ದರು. ಈಗ ಅವರಿಗೂ ಗೊತ್ತಾಗುತ್ತೆ.

11ನೇ ತಾರೀಖಿನಿಂದ ಫ್ರೀ ಬಸ್ ಪ್ರಯಾಣ ಎನ್ನುತ್ತಿದ್ದಾರೆ. ಅದಾದ ನಂತರ ಏನೇನೋ ಪರಿಸ್ಥಿತಿ ನಿರ್ಮಾಣವಾಗುತ್ತದೆ, ನಿಗಮ ಯಾವ ಪರಿಸ್ಥಿತಿಗೆ ಹೋಗುತ್ತದೆ ಅನ್ನೋದನ್ನ ಜನರಿಗೆ ಅರಿವಾಗುತ್ತೆ. ಸ್ವಾತಂತ್ರ್ಯಕ್ಕೂ ಮುನ್ನ ಯಾರಾದ್ರೂ ಸ್ವಾತಂತ್ರ್ಯಕ್ಕೂ ಮುನ್ನ ಯಾರಾದ್ರೂ ಟೋಪಿ ಹಾಕಿಕೊಂಡಿದ್ದರೆ ಅವರನ್ನು ಕಾಂಗ್ರೆಸ್ ನವರು ಎನ್ನುತ್ತಿದ್ದರು. ಈಗ ಕಾಂಗ್ರೆಸ್ ನವರನ್ನು ಇನ್ನೊಂದೆರಡು ತಿಂಗಳು ಕಾಂಗ್ರೆಸ್ ನೂರನ್ನು ಕಂಡರೆ ಟೋಪಿ ಹಾಕಲು ಬಂದಿದ್ದಾರೆ ಎಂದು ಜನ ಭಾವಿಸುತ್ತಾರೆ. ಅಲ್ಲಿವರೆಗೆ ನಾವು ಸಮಾಧಾನದಿಂದ ಇರುತ್ತೇವೆ," ಎಂದು ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ನೀವು ಏನು ಹೇಳಿದ್ರಿ ಅದನ್ನು ಈಡೇರಿಸುವ ಕೆಲಸ ಮಾಡಿ ನೀವು ಯಾವಾಗಲೂ ಖಚಿತ ಉಚಿತ ಎಂದಾಗ ಕಂಡೀಶನ್ ಬಗ್ಗೆ ಹೇಳಿರಲಿಲ್ಲ ಈಗ ಕೂಡ ಕಂಡಿಶನ್ ಹಾಕದೇ ಕೆಲಸವನ್ನು ಮಾಡಿ, ಎಂದು ಒತ್ತಾಯಿಸಿದ್ದಾರೆ.

ಇದಲ್ಲದೇ, "ಸಿದ್ದರಾಮಯ್ಯ ಅವರೇ, ಇಲ್ಲಿಯವರೆಗೆ ಯಾವ್ಯಾವ ಮುಖ್ಯಮಂತ್ರಿಗಳು ಎಷ್ಟು ಸಾಲ ಮಾಡಿದ್ದಾರೆ. ಒಟ್ಟು ಎಷ್ಟು ಸಾಲ ಇದೆ ಎಂದು ಬಹಿರಂಗಪಡಿಸಿ. ಎಕೆಂದರೆ ಮುಂದೆ ನೀವು ಎಷ್ಟು ಎಷ್ಟು ಸಾಲದ ಹೊರೆ ತಂದಿಡುತ್ತೀರಾ, ಅನ್ನೋದು ಜನರಿಗೆ ಗೊತ್ತಾಗಬೇಕು. ಏಕೆಂದರೆ, ಪಕ್ಕದಲ್ಲಿ ಶ್ರೀಲಂಕಾ ಪಾಕಿಸ್ತಾನ ಬಾಂಗ್ಲಾದೇಶ ವೆನಿಜುಯಲ್ಲ ಬಂದಂತ ಸ್ಥಿತಿ ಮುಂದೊಂದು ದಿನ ಕರ್ನಾಟಕಕ್ಕೆ ಬಂದಾಗ ವೋಟ್ ಪಡೆಯಲು ಖಚಿತ ಎಂದು ಹೇಳಿ, ಜನರ ಮಕ್ಕಳ ಭವಿಷ್ಯದ ಮೇಲೆ ಕಲ್ಲುಹಾಕಿ ಹೋಗಿದ್ದೀರಾ ಎಂದು ಜನರಿಗೆ ಅರ್ಥ ಆಗಬೇಕು ಅದಕ್ಕಾಗಿ ಒಂದು ಶ್ವೇತಪತ್ರ ಹೊರಡಿಸಿ ಎಂದು ಕೇಳಿದ್ವಿ, ದಯವಿಟ್ಟು ಆ ಕೆಲಸವನ್ನು ಮಾಡಿ", ಎಂದು ಒತ್ತಾಯಿಸಿದ್ದಾರೆ

English summary :In another two month citizens will start beleiving Congress people as cheaters - MP Sinha

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ರಾಮ್ ಲಲ್ಲಾಗೆ ಪೂಜೆ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ರಾಮ್ ಲಲ್ಲಾಗೆ ಪೂಜೆ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಸೂಪರ್ಸಾನಿಕ್ ಮಿಸೈಲ್-ಅಸಿಸ್ಟೆಡ್ ರಿಲೀಸ್ ಆಫ್ ಟಾರ್ಪಿಡೊ ಹಾರಾಟ-ಪರೀಕ್ಷೆ ಯಶಸ್ವಿ
ಸೂಪರ್ಸಾನಿಕ್ ಮಿಸೈಲ್-ಅಸಿಸ್ಟೆಡ್ ರಿಲೀಸ್ ಆಫ್ ಟಾರ್ಪಿಡೊ ಹಾರಾಟ-ಪರೀಕ್ಷೆ ಯಶಸ್ವಿ
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ, ಕಾಂಗ್ರೆಸ್ ರಾಜ್ಯ ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ? - ಅಮಿತ್ ಷಾ
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ, ಕಾಂಗ್ರೆಸ್ ರಾಜ್ಯ ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ? - ಅಮಿತ್ ಷಾ
ನಮ್ಮ ಮುಸ್ಲಿಂ ಜಾತಿ ಗಣತಿ ಪ್ರಸ್ತಾಪದಿಂದಾಗಿ ಮುಸ್ಲಿಮರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ - ಸಿಎಂ ಹಿಮಂತ ಶರ್ಮಾ
ನಮ್ಮ ಮುಸ್ಲಿಂ ಜಾತಿ ಗಣತಿ ಪ್ರಸ್ತಾಪದಿಂದಾಗಿ ಮುಸ್ಲಿಮರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ - ಸಿಎಂ ಹಿಮಂತ ಶರ್ಮಾ
ಅಂಕೋಲಾ ಬಸ್ ನಿಲ್ದಾಣದ ಹಣ್ಣು ಮಾರಾಟಗಾರ್ತಿ ಮೋಹಿನಿ ಗೌಡ ಭೇಟಿ ಮಾಡಿ ಮಾತನಾಡಿದ ಪ್ರಧಾನಿ ಮೋದಿ
ಅಂಕೋಲಾ ಬಸ್ ನಿಲ್ದಾಣದ ಹಣ್ಣು ಮಾರಾಟಗಾರ್ತಿ ಮೋಹಿನಿ ಗೌಡ ಭೇಟಿ ಮಾಡಿ ಮಾತನಾಡಿದ ಪ್ರಧಾನಿ ಮೋದಿ
ರಾಜರು, ಮಹಾರಾಜರು ಭೂಗಳ್ಳರು ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ ಪ್ರಧಾನಿ ಮೋದಿ
ರಾಜರು, ಮಹಾರಾಜರು ಭೂಗಳ್ಳರು ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ ಪ್ರಧಾನಿ ಮೋದಿ
ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ವಿಚಾರ: ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನ
ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ವಿಚಾರ: ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನ
ನೀವು ರಾಷ್ಟ್ರೀಯತೆಗಿಂತ ಹೆಚ್ಚು ಆದ್ಯತೆ ವೈಯಕ್ತಿಕ ಹಿತಾಸಕ್ತಿಗೆ ಇಟ್ಟುಕೊಂಡಿದ್ದೀರಿ - ದೆಹಲಿ ಹೈಕೋರ್ಟ್ ಎಎಪಿ ಸರ್ಕಾರವನ್ನು ಖಂಡಿಸುತ್ತದೆ
ನೀವು ರಾಷ್ಟ್ರೀಯತೆಗಿಂತ ಹೆಚ್ಚು ಆದ್ಯತೆ ವೈಯಕ್ತಿಕ ಹಿತಾಸಕ್ತಿಗೆ ಇಟ್ಟುಕೊಂಡಿದ್ದೀರಿ - ದೆಹಲಿ ಹೈಕೋರ್ಟ್ ಎಎಪಿ ಸರ್ಕಾರವನ್ನು ಖಂಡಿಸುತ್ತದೆ
ಸಂದೇಶಖಾಲಿಯಲ್ಲಿ ಭಾರಿ ಶಸ್ತ್ರಾಸ್ತ್ರ ವಶ : ಟಿಎಂಸಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲು ಬಿಜೆಪಿ ಆಗ್ರಹ
ಸಂದೇಶಖಾಲಿಯಲ್ಲಿ ಭಾರಿ ಶಸ್ತ್ರಾಸ್ತ್ರ ವಶ : ಟಿಎಂಸಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲು ಬಿಜೆಪಿ ಆಗ್ರಹ
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಿಂದ ಮಸ್ಟರಿಂಗ್ ಕೇಂದ್ರಗಳ ಭೇಟಿ ಹಾಗೂ ಪರಿಶೀಲನೆ
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಿಂದ ಮಸ್ಟರಿಂಗ್ ಕೇಂದ್ರಗಳ ಭೇಟಿ ಹಾಗೂ ಪರಿಶೀಲನೆ
40 ಕೋಟಿ ಜನರ ಬಡತನ ನಿರ್ಮೂಲನೆ, ಅಧಿಕಾರಶಾಹಿ ವ್ಯವಸ್ಥೆ ಮುಗಿಸಲು ಕಠಿಣ ಆಡಳಿತ,  ಮೋದಿ ನಂಬಲಾಗದ ಕೆಲಸ ಮಾಡಿದ್ದಾರೆ - ಜೆಪಿ ಮೋರ್ಗಾನ್ ಸಿಇಒ
40 ಕೋಟಿ ಜನರ ಬಡತನ ನಿರ್ಮೂಲನೆ, ಅಧಿಕಾರಶಾಹಿ ವ್ಯವಸ್ಥೆ ಮುಗಿಸಲು ಕಠಿಣ ಆಡಳಿತ, ಮೋದಿ ನಂಬಲಾಗದ ಕೆಲಸ ಮಾಡಿದ್ದಾರೆ - ಜೆಪಿ ಮೋರ್ಗಾನ್ ಸಿಇಒ
ಪಕ್ಷದ ಚುನಾವಣಾ ಪ್ರಣಾಳಿಕೆ ಪತ್ರ ವನ್ನು ಖುದ್ದಾಗಿ ವಿವರಿಸಲು ಪ್ರಧಾನಿ ಮೋದಿ ಸಮಯ ಕೇಳಿದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ
ಪಕ್ಷದ ಚುನಾವಣಾ ಪ್ರಣಾಳಿಕೆ ಪತ್ರ ವನ್ನು ಖುದ್ದಾಗಿ ವಿವರಿಸಲು ಪ್ರಧಾನಿ ಮೋದಿ ಸಮಯ ಕೇಳಿದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ

ನ್ಯೂಸ್ MORE NEWS...