Thu,Sep11,2025
ಕನ್ನಡ / English

ಗುತ್ತಿಗೆದಾರರಿಗೆ 1 ರೂಪಾಯಿ ಕೊಟ್ಟಿಲ್ಲ, ಸಚಿವರು ರೇಟ್ ಫಿಕ್ಸ್ ಮಾಡುತ್ತಿದ್ದಾರೆ, ಎಲ್ಲಿದ್ದೀರಿ ಕೆಂಪಣ್ಣ | JANATA NEWS

19 Jun 2023
1177

ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಸಚಿವರು ತಮ್ಮ ಇಲಾಖೆ ಕಾಮಗಾರಿಗೆ ಕಮಿಷನ್‌ ರೇಟ್‌ ಫಿಕ್ಸ್ ಮಾಡುತ್ತಿದ್ದಾರೆ ಎಲ್ಲಿದ್ದೀರಿ ಕೆಂಪಣ್ಣ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.

ಹಲವು ಸಚಿವರು ತಮ್ಮ ಖಾತೆಗಳ ಕಾಮಗಾರಿಗಳನ್ನು ನಿಲ್ಲಿಸಿದ್ದಾರೆ. ಗುತ್ತಿಗೆದಾರರಿಗೆ 1 ರೂಪಾಯಿ ಕೊಟ್ಟಿಲ್ಲ, ಅವರ ಜೊತೆ ರೇಟ್ ಫಿಕ್ಸ್ ಮಾಡಿಕೊಳ್ಳುತ್ತಿದ್ದಾರೆ ಎಂದು
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪ ಮಾಡಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ‌ ಬಂದ ದಿನದಿಂದ ಗೊಂದಲದ ಗೂಡಾಗಿದೆ. ಉಚಿತ ಬಸ್ ಪ್ರಯಾಣ ಗ್ಯಾರಂಟಿ ಯೋಜನೆ ಅದ್ವಾನ ಆಗಿದೆ. ಸರಿಯಾಗಿ‌ ಬಸ್ ಗಳ ವ್ಯವಸ್ಥೆ ಮಾಡದೇ ಫ್ರೀ ಬಸ್ ಯೋಜನೆ ಅಂದರೆ ಹೇಗೆ? ಸರಿಯಾದ ಬಸ್ ಸೇವೆ ಒದಗಿಸದೇ ಇರುವುದರಿಂದ ಸಾರ್ವಜನಿಕರು ಬಾಯಿಗೆ ಬಂದಹಾಗೆ ಬೈತಾರಂತೆ, ಕೆಲಸ ಮಾಡಲು ಆಗುತ್ತಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ ಎಂದರು.

ಹಲವಾರು ಸಚಿವರು ಹಿಂದಿನ ಅವಧಿಯ‌ ಕಾಮಗಾರಿ, ಮನೆ ನಿರ್ಮಾಣ ಎಲ್ಲವನ್ನೂ‌ ನಿಲ್ಲಿಸಿದ್ದಾರೆ. ಸರ್ಕಾರ ಬಂದು ತಿಂಗಳು ಕಳೆದರೂ ಸಚಿವರು ತಮ್ಮ ಇಲಾಖೆಗಳ ಮಾತನಾಡುತ್ತಿಲ್ಲ. ಇನ್ನು ಮಳೆಗಾಲ ಆರಂಭವಾಗುತ್ತದೆ. ಯಾವುದೇ ಕಾಮಗಾರಿ ನಡೆಯುವುದಿಲ್ಲ. ಇಡೀ‌ ಒಂದು ವರ್ಷದ ಕಾರ್ಯಕ್ರಮಗಳನ್ನ ಅಲ್ಲೋಲ‌ಕಲ್ಲೋಲ ಮಾಡುತ್ತಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಜೊತೆ ಸೇರಿಕೊಂಡು ಆರೋಪ ಮಾಡುತ್ತಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಈಗೆಲ್ಲಿದ್ದಾರೆ. ಸಚಿವರುಗಳು ರೇಟ್ ಫಿಕ್ಸ್ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಸರ್ಕಾರದ ಮೇಲೆ ಆರೋಪ ಮಾಡಿದವರು. ಈಗ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಮಾತಿಗೆ ತಪ್ಪಿದ ಸರ್ಕಾರ ಎಂದು ಹೇಳಿದ ಬೊಮ್ಮಾಯಿ, ಕಾಂಗ್ರೆಸ್​​ನವರು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಜನ ಬಾಯಿಗೆ ಬಂದಂತೆ ಉಗಿಯುತ್ತಿದ್ದಾರೆ. ಕಾಂಗ್ರೆಸ್​ಗೆ ಸರ್ಕಾರ ನಡೆಸುವ ಯೋಗ್ಯತೆ ಇಲ್ಲ ಎಂದರು. ಅಲ್ಲದೆ, ಅಕ್ಕಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ​ ರಾಜಕೀಯ ಪ್ರೇರಿತ ಪ್ರತಿಭಟನೆಗೆ ಮುಂದಾಗಿದೆ ಎಂದರು.

RELATED TOPICS:
English summary :1 rupee has not been given to the contractor, the minister is fixing the rate, where are you kempanna?

ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಅಕ್ರಮ ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ವಂಚಿಸಿದ ಪ್ರಕರಣ : ಇಡಿ ದಾಳಿಯಲ್ಲಿ ರೂ.100 ಕೋಟಿ ಚಿನ್ನ ಬೆಳ್ಳಿ ವಶ
ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಅಕ್ರಮ ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ವಂಚಿಸಿದ ಪ್ರಕರಣ : ಇಡಿ ದಾಳಿಯಲ್ಲಿ ರೂ.100 ಕೋಟಿ ಚಿನ್ನ ಬೆಳ್ಳಿ ವಶ
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಗೆಲವು
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಗೆಲವು
ನೇಪಾಳದಲ್ಲಿ ಕಮ್ಯುನಿಸ್ಟ್ ಪಕ್ಷದ ಸರ್ಕಾರದ ಪತನದ ಬಳಿಕವೂ ಸಂಸತ್ತು, ಸುಪ್ರೀಂ ಕೋರ್ಟ್ ಮೇಲೆ ದಾಳಿ ನಡೆಸಿದ ಪ್ರತಿಭಟನಾಕಾರರು :
ನೇಪಾಳದಲ್ಲಿ ಕಮ್ಯುನಿಸ್ಟ್ ಪಕ್ಷದ ಸರ್ಕಾರದ ಪತನದ ಬಳಿಕವೂ ಸಂಸತ್ತು, ಸುಪ್ರೀಂ ಕೋರ್ಟ್ ಮೇಲೆ ದಾಳಿ ನಡೆಸಿದ ಪ್ರತಿಭಟನಾಕಾರರು :
ನಿಮ್ಮ ನಡವಳಿಕೆಯು ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ದುರಹಂಕಾರ ಮತ್ತು ಅಹಂಕಾರಕ್ಕೆ ಸಾಕ್ಷಿಯಾಗಿದೆ - ಖರ್ಗೆ ರನ್ನು ತರಾಟೆಗೆ ತೆಗೆದುಕೊಂಡ ಎಚ್‌ಡಿಕೆ
ನಿಮ್ಮ ನಡವಳಿಕೆಯು ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ದುರಹಂಕಾರ ಮತ್ತು ಅಹಂಕಾರಕ್ಕೆ ಸಾಕ್ಷಿಯಾಗಿದೆ - ಖರ್ಗೆ ರನ್ನು ತರಾಟೆಗೆ ತೆಗೆದುಕೊಂಡ ಎಚ್‌ಡಿಕೆ
ಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆಯಂದು  ಅವರ ದೃಷ್ಟಿಕೋನ, ಪ್ರಭಾವ ಸ್ಮರಿಸಿದ ಪ್ರಧಾನಿ ಮೋದಿ
ಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆಯಂದು ಅವರ ದೃಷ್ಟಿಕೋನ, ಪ್ರಭಾವ ಸ್ಮರಿಸಿದ ಪ್ರಧಾನಿ ಮೋದಿ
ಭಾರತ-ಅಮೆರಿಕ ನಡುವೆ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವ ಬಹಳ ಸಕಾರಾತ್ಮಕವಾಗಿದೆ - ಪ್ರಧಾನಿ ಮೋದಿ
ಭಾರತ-ಅಮೆರಿಕ ನಡುವೆ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವ ಬಹಳ ಸಕಾರಾತ್ಮಕವಾಗಿದೆ - ಪ್ರಧಾನಿ ಮೋದಿ
ಭಾರತೀಯ ಪೌರತ್ವ ಪಡೆಯುವ ಮೂರು ವರ್ಷಗಳ ಮೊದಲೇ ಮತ ಚಲಾವಣೆ : ಸೋನಿಯಾ ಗಾಂಧಿ ವಿರುದ್ಧ ಕ್ರಿಮಿನಲ್ ದೂರು
ಭಾರತೀಯ ಪೌರತ್ವ ಪಡೆಯುವ ಮೂರು ವರ್ಷಗಳ ಮೊದಲೇ ಮತ ಚಲಾವಣೆ : ಸೋನಿಯಾ ಗಾಂಧಿ ವಿರುದ್ಧ ಕ್ರಿಮಿನಲ್ ದೂರು
11
11
ಭಾರತವನ್ನು ಹೆಸರಿಸುವಾಗ ಹೆಚ್ಚು ಗೌರವಯುತ ವಿಧಾನ ಬಳಸಲು ಅಮೆರಿಕಕ್ಕೆ ನಿರ್ದೇಶಿಸಿದ ಫಿನ್ಲ್ಯಾಂಡ್ ಅಧ್ಯಕ್ಷ
ಭಾರತವನ್ನು ಹೆಸರಿಸುವಾಗ ಹೆಚ್ಚು ಗೌರವಯುತ ವಿಧಾನ ಬಳಸಲು ಅಮೆರಿಕಕ್ಕೆ ನಿರ್ದೇಶಿಸಿದ ಫಿನ್ಲ್ಯಾಂಡ್ ಅಧ್ಯಕ್ಷ
2 ಮತದಾರರ ಗುರುತಿನ ಚೀಟಿಹೊಂದಿದಕ್ಕಾಗಿ ಕಾಂಗ್ರೆಸ್ ವಕ್ತಾರ ಪವನ್ ಖೇರಾಗೆ ಚುನಾವಣಾ ಕಚೇರಿಯ ನೋಟಿಸ್
2 ಮತದಾರರ ಗುರುತಿನ ಚೀಟಿಹೊಂದಿದಕ್ಕಾಗಿ ಕಾಂಗ್ರೆಸ್ ವಕ್ತಾರ ಪವನ್ ಖೇರಾಗೆ ಚುನಾವಣಾ ಕಚೇರಿಯ ನೋಟಿಸ್
ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲದ ನನ್ನ ತಾಯಿ ವಿರುದ್ಧ ಅನುಚಿತ ಭಾಷೆಯನ್ನು ಏಕೆ ಬಳಸಿದ್ದಾರೆ? - ಪ್ರಧಾನಿ ಮೋದಿ
ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲದ ನನ್ನ ತಾಯಿ ವಿರುದ್ಧ ಅನುಚಿತ ಭಾಷೆಯನ್ನು ಏಕೆ ಬಳಸಿದ್ದಾರೆ? - ಪ್ರಧಾನಿ ಮೋದಿ
ಸೆಮಿಕಾನ್ ಇಂಡಿಯಾ 2025 : ವಿಕ್ರಮ್ 32-ಬಿಟ್ ಪ್ರೊಸೆಸರ್  ಸೆಮಿಕಂಡಕ್ಟರ್ ಚಿಪ್ ಬಿಡುಗಡೆ ಮಾಡಿದ ಪ್ರಧಾನಿ ಮೋದಿ
ಸೆಮಿಕಾನ್ ಇಂಡಿಯಾ 2025 : ವಿಕ್ರಮ್ 32-ಬಿಟ್ ಪ್ರೊಸೆಸರ್ ಸೆಮಿಕಂಡಕ್ಟರ್ ಚಿಪ್ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ನ್ಯೂಸ್ MORE NEWS...