ನೇಪಾಳದ ಗೌರಿಶಿಖರದ ಬಳಿ ಹೆಲಿಕಾಪ್ಟರ್ ಪತನ ಐವರ ಸಾವು, ಇನ್ನೊಬ್ಬರು ಕಾಣೆ | JANATA NEWS
ಕಟ್ಮಂಡು : ವಿದೇಶಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ನೇಪಾಳದ ಮೌಂಟ್ ಎವರೆಸ್ಟ್(ಗೌರಿಶಿಖರ) ಬಳಿ ಪತನಗೊಂಡ ನಂತರ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಇನ್ನೂ ಕಾಣೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಮನಂಗ್ ಏರ್ ನಿರ್ವಹಿಸುತ್ತಿದ್ದ ಹೆಲಿಕಾಪ್ಟರ್‌ನಲ್ಲಿ ಐವರು ಮೆಕ್ಸಿಕನ್ ಪ್ರಜೆಗಳು ಮತ್ತು ನೇಪಾಳಿ ಪೈಲಟ್ ಮಂಗಳವಾರ ವಿಶ್ವದ ಅತಿ ಎತ್ತರದ ಶಿಖರಕ್ಕೆ ದೃಶ್ಯವೀಕ್ಷಣೆಯ ಪ್ರವಾಸದ ನಂತರ ರಾಜಧಾನಿ ಕಠ್ಮಂಡುವಿಗೆ ಮರಳುತ್ತಿದ್ದರು.
ಹವಾಮಾನ ಪರಿಸ್ಥಿತಿಗಳು ಹೆಲಿಕಾಪ್ಟರ್‌ನ ಯೋಜಿತ ಹಾರಾಟದ ಮಾರ್ಗವನ್ನು ಬದಲಾಯಿಸಲು ಒತ್ತಾಯಿಸಿದೆ, ಎನ್ನಲಾಗಿದೆ.
ರಕ್ಷಕರು ಐವರ ಶವಗಳನ್ನು ಹೊರತೆಗೆದಿದ್ದು, ಆರನೇ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
English summary : Five dead, one missing in helicopter crash near Gowrishikhar in Nepal