Mon,May20,2024
ಕನ್ನಡ / English

ನಗರಸಭೆ ಸಾಮಾನ್ಯ ಸಭೆ: ಯುಜಿಡಿ ವೈಫಲ್ಯ ಕುರಿತು ಚರ್ಚೆ | Janata news

02 Jun 2018
843

ಕಾರವಾರ : ನಗರದ ಏಳು ವಾರ್ಡಿಗೆ ಪ್ರಾಯೋಗಿಕವಾಗಿ ನಿರ್ಮಿಸಲಾಗಿರುವ ಯುಜಿಡಿ(ಅಂಡರ್ ಗ್ರೌಂಡ್ ಡ್ರೈನೇಜ್) ಯೋಜನೆ ಸಂಪೂರ್ಣವಾಗಿ ವೈಫಲ್ಯತೆ ಕಂಡಿದ್ದು, ಹೀಗಾಗಿ ಅದನ್ನು ಸರಿಪಡಿಸುವ ತನಕ ಯುಜಿಡಿಗೆ ಶೌಚಾಲಯಗಳ ಅಕ್ರಮ ಸಂಪರ್ಕವನ್ನು ಸಕ್ರಮಗೊಳಿಸಬಾರದು, ಎಂದು ಅಧ್ಯಕ್ಷ ಗಣಪತಿ ವಿ.ನಾಯ್ಕ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಇಲ್ಲಿನ ನಗರಸಭೆಯ ಸಭಾಂಗಣದಲ್ಲಿ ಶನಿವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಮಳೆಗಾಲ ಪೂರ್ವದಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.

ಯುಜಿಡಿ ಬಗ್ಗೆ ಪ್ರಸ್ತಾಪಿಸಿದ ಸಂದೀಪ್ ತಳೇಕರ, ದೇವಿದಾಸ್ ನಾಯ್ಕ, ಸಂತೋಷ ನಾಯ್ಕ, ಡಾ.ನಿತೀನ್ ಪಿಕಳೆ, ಮಹೇಶ ತಾಮ್ಸೆ ಮುಂತಾದ ಸದಸ್ಯರು ಕಳೆದ ಹದಿನೈದು ವರ್ಷಗಳಿಂದ ಯುಜಿಡಿ ವಿಫಲತೆ ಬಗ್ಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗುತ್ತಿದೆ. ಯುಜಿಡಿ ಮೂಲಕ ಮಲೀನ ನೀರು ಸರಿಯಾಗಿ ಹರಿಯುತ್ತಿಲ್ಲ. ಇಂಗುಗುಂಡಿ ಹಾಗೂ ಪೈಪ್ ಲೈನ್ ಸಂಪರ್ಕದಲ್ಲಿ ಮೇಲೆ ಕೆಳಗೆ ವ್ಯತ್ಯಾಸ ಇದೆ. ಇದರಿಂದ ಮೇಲಿನಿಂದ ಕೆಳಮುಖವಾಗಿ ಹರಿದು ಶುದ್ದೀಕರಣ ಘಟಕಕ್ಕೆ ಮಲೀನ ನೀರು ಸರಿಯಾಗಿ ಹರಿದು ಹೋಗುತ್ತಿಲ್ಲ. ಕೆಲವು ಕಡೆ ಯುಜಿಡಿ ಪೈಪ್‍ಲೈನ್ ಸಂಪರ್ಕ ಸಾಮಾನ್ಯವಾಗಿದ್ದರೂ, ಉಳಿದ ಕಡೆ ಸಂಪರ್ಕ ತೀರ ಹದಗೆಟ್ಟು ಹೋಗಿದೆ. ಹೀಗಾಗಿ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಿರುವ ಇಂಗುಗುಂಡಿನಿಂದ ಕೊಳಚೆ ನೀರು ತುಂಬಿ ಹರಿಯುತ್ತಿದೆ. ಓವರ್ ಪ್ಲೋ ಆಗುವಲ್ಲಿ ನಗರಸಭೆ ಶೌಚಾಲಯದ ಟ್ಯಾಂಕ್ ಖಾಲಿ ಮಾಡುವ ವಾಹನದಿಂದ ಮಲೀನ ನೀರು ಹೀರಿಕೊಂಡು ಶುದ್ಧೀಕರಣ ಘಟಕಕ್ಕೆ ಸಾಗಿಸಲಾಗುತ್ತದೆ. ಇದಲ್ಲದೇ ಒಳಚರಂಡಿ ಬ್ಲಾಕೇಜ್ ಸರಿಪಡಿಸಲು ಹೋದ ಇಬ್ಬರು ಪೌರ ಕಾರ್ಮಿಕರು ಈಗಾಗಲೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಈ ಕಾರಣದಿಂದ ಯೋಜನೆ ವಿಫಲಗೊಂಡಿದ್ದರ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ನೀಡಬೇಕಾದ 75 ಲಕ್ಷ ರೂ. ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಹೀಗಿರುವಾಗ ಯುಜಿಡಿಗೆ ಅಕ್ರಮ ಸಂಪರ್ಕ ನೀಡಿರುವ 11 ಬಹುಮಹಡಿ ಕಟ್ಟಡಗಳ ಸಂಪರ್ಕ ಸಕ್ರಮಗೊಳಿಸಬಾರದು, ಎಂದು ಒತ್ತಾಯಿಸಿದರು.

ಪ್ರಭಾರಿ ಪೌರಾಯುಕ್ತ ಅಭಿಜಿನ್ ಮಾತನಾಡಿ, ಯುಜಿಡಿಗೆ ಅಕ್ರಮವಾಗಿ ಯುಜಿಡಿ ಸಂಪರ್ಕ ಪಡೆದ ಬಹುಮಹಡಿ ಕಟ್ಟಡಗಳ ಮಾಲೀಕರಿಗೆ 15000 ರೂ.ದಂಡ ವಿಸಿ ಸಕ್ರಮ ಮಾಡಲು ಅವಕಾಶ ಇದೆ. ಇದರಿಂದ ನಗರಸಭೆಗೆ ಆದಾಯವೂ ಸಹ ಹರಿದು ಬರುತ್ತದೆ. ಎಲ್ಲ ನಾಗರೀಕರಿಗೂ ಸಮಾನವಾದ ಮೂಲಭೂತ ಸೇವೆ ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶವಿದೆ. ಒಂದು ವೇಳೆ ನಾವು ಸಕ್ರಮ ಮಾಡಿಕೊಡದಿದ್ದರೆ, ಕಟ್ಟಡ ಮಾಲೀಕರು ಕೋರ್ಟ್ ಮೊರೆ ಹೋಗಬಹುದು. ಕೋರ್ಟ್ ವ್ಯವಹಾರದಿಂದ ನಗರಸಭೆಗೆ ವೆಚ್ಚ ತಗುಲಬಹುದು. ಇದಲ್ಲದೇ ಅಕ್ರಮ ಸಕ್ರಮಗೊಳಿಸಲು ಕೋರ್ಟ್ ಆದೇಶನೂ ಕೊಡಬಹುದು ಎಂದು ಸಭೆಯ ಗಮನಕ್ಕೆ ತಂದರು. ಆದರೂ ಬಹುತೇಕ ಸದಸ್ಯರು ಯುಜಿಡಿ ಸಂಪರ್ಕ ಸಕ್ರಮಗೊಳಿಸುವುದು ಬೇಡ ಎಂದು ಹಠ ಹಿಡಿದರು. ಕೊನೆಗೂ ಸಂಪರ್ಕ ನೀಡುವುದು ಬೇಡ, ಎಂಬ ನಿರ್ಣಯ ಕೈಗೊಳ್ಳಲಾಯಿತು.

ಅದಕ್ಕೂ ಮುನ್ನ ಸಭೆಯ ಆರಂಭದಲ್ಲಿಯೇ ವಾಜಪೇಯಿ ವಸತಿ ಯೋಜನೆಯಡಿ ಮನೆ ಮಂಜೂರಿಯಾದ 152 ಫಲಾನುಭವಿಗಳಿಗೆ ಇನ್ನು ತನಕ ಹಣ ಬಿಡುಗಡೆ ಮಾಡಿಲ್ಲ ಯಾಕೆ? ಎಂದು ಸದಸ್ಯ ದೇವಿದಾಸ್ ನಾಯ್ಕ ಪ್ರಶ್ನಿಸಿದರು. ಫಲಾನುಭವಿಗಳಿಗೆ ಹಣದ ಕಂತು ತಡೆಹಿಡಿಯಲು ಕಾರಣ ಏನೆಂಬುದನ್ನು ಪರಿಶೀಲಿಸಿ ಎರಡು ದಿನದೊಳಗೆ ಉತ್ತರ ನೀಡುತ್ತೇನೆ, ಎಂದು ಪ್ರಭಾರಿ ಆಯುಕ್ತರು ತಿಳಿಸಿದರು.

ಬಳಿಕ ನಗರೋತ್ಥಾನ ಯೋಜನೆಯಡಿ 31 ವಾರ್ಡುಗಳಲ್ಲಿ ಯಾವ್ಯಾವ ರಸ್ತೆಗಳ ಕಾಮಗಾರಿ ನಡೆಸಲಾಗುತ್ತದೆ ಎಂದು ಬಹುತೇಕ ಸದಸ್ಯರು ಕೇಳಿದ ಪ್ರಶ್ನೆಗೆ ಸಹಾಯಕ ಎಂಜಿನೀಯರ್ ಮೋಹನ್‍ರಾಜ್ ಮಾತನಾಡಿ, ನಗರೋತ್ಥಾನ ಯೋಜನೆಯಡಿ 33 ರಸ್ತೆಗಳಿಗೆ ಡಾಂಬರೀಕರಣಗೊಳಿಸಲು 29 ಕೋಟಿ 39 ಲಕ್ಷ ರೂ.ವೆಚ್ಚದ ಯೋಜನೆಗಳು ಪ್ರಗತಿಯಲ್ಲಿವೆ. ಅದರಲ್ಲಿ 7 ಕಾಮಗಾರಿಗಳು ಮುಗಿದಿವೆ ಎಂದು ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಹುತೇಕ ಸದಸ್ಯರು ನಮ್ಮ ವಾರ್ಡಿನಲ್ಲಿ ರಸ್ತೆಗಳಿಗೆ ಡಾಂಬರೀಕರಣ ಯಾಕೆ ಮಾಡಿಲ್ಲ ಎಂದು ಮೇಜು ಕುಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪೌರಾಯುಕ್ತ ಅಭಿಜಿನ್ ಉತ್ತರಿಸಿ, ಮಳೆಗಾಲದಲ್ಲಿ ರಸ್ತೆಗಳಿಗೆ ಡಾಂಬರೀಕರಣ ಮಾಡಿದರೆ, ಕಳಪೆ ಕಾಮಗಾರಿಗೆ ಅವಕಾಶ ನೀಡಿದಂತಾಗುತ್ತದೆ. ಕೆಲವು ಕಡೆ ತಾನು ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ರಸ್ತೆಯ ಅಗಲ ಕಡಿಮೆಗೊಳಿಸಿ ಡಾಂಬರೀಕರಣಗೊಳಿಸಲಾಗುತ್ತಿದೆ. ಈ ಬಗ್ಗೆ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಕೈಗೊಂಡಿದ್ದೇನೆ. ಸದ್ಯ ಮಳೆಗಾಲ ಮುಗಿಯುವವರೆಗೂ ಡಾಂಬರೀಕರಣ ಬೇಡ. ಅವಶ್ಯಕತೆ ಇದ್ದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲು ಆದ್ಯತೆ ನೀಡೋಣ. ಕಾಮಗಾರಿ ಕಳಪೆ ಗುಣಮಟ್ಟದ್ದಾದರೆ, ಗುತ್ತಿಗೆದಾರನಿಗೆ ಹಣ ಪಾವತಿ ಮಾಡುವುದಿಲ್ಲ ಎಂದು ಸದಸ್ಯರನ್ನು ಸಮಾಧಾನ ಪಡಿಸಿದರು.

ನಂತರ ಬೇಜವಾಬ್ದಾರಿಯಿಂದ ಗೃಹ ನಿರ್ಮಾಣದ ಸಾಮಗ್ರಿ, ಕಸ, ಕಡ್ಡಿ, ಪ್ಲಾಸ್ಟಿಕ್ ಮುಂತಾದವುಗಳನ್ನು ಚರಂಡಿಗಳಲ್ಲಿ ಬೀಸಾಕುವವರ ಮೇಲೆ ಸೂಕ್ತ ದಂಡ ವಿಧಿಸಬೇಕು. ಇನ್ನು ಸುಶಿಕ್ಷಿತರು ಹಾಗೂ ಸರಕಾರಿ ಆಫೀಸರ್ಸ್‍ಗಳು ರಾತ್ರಿ ಸಮಯದಲ್ಲಿ ಕಸ ಎಲ್ಲೆಂದರಲ್ಲಿ ಚೆಲ್ಲುತ್ತಾರೆ ಎಂದು ಸಂತೋಷ ನಾಯ್ಕ, ಪ್ರದೀಪ್ ಗುನಗಿ ಮುಂತಾದ ಸದಸ್ಯರು ಸಭೆಯ ಗಮನಕ್ಕೆ ತಂದರು. ಇದಲ್ಲದೇ ಬೆಳಗ್ಗೆ ಸರಿಯಾಗಿ ಕಸ ವಿಲೇವಾರಿಯಾಗದ ಕಾರಣ ಕೆಲಸಕ್ಕೆ ಹೋಗುವ ಆಫೀಸರ್ಸ್‍ಗಳು ರಾತ್ರಿ ಸಮಯದಲ್ಲಿ ರಸ್ತೆ ಮೇಲೆ, ಚರಂಡಿ ಒಳಗೆ ಕಸ ಚೆಲ್ಲುತ್ತಾರೆ ಎಂದು ಸದಸ್ಯ ಕೆ.ಟಿ.ತಾಂಡೇಲ್ ಹೇಳಿದರು. ಕಸ ವಿಲೇವಾರಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿ ಮಾಡಲು ಮನೆ ತೆರಿಗೆಯ ಮೇಲೆ ಶೇ.10 ರಷ್ಟು ಶುಲ್ಕ ವಸೂಲಿ ಮಾಡುವುದರ ಕುರಿತು ಠರಾವು ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಲೀಲಾಬಾಯಿ ಠಾಣೇಕರ, ನಗರಸಭೆಯ ಅಧಿಕಾರಿಗಳು ಹಾಜರಿದ್ದರು.

ಸೂಚನೆ : ಮೇಲಿನ ಮಾಹಿತಿಗಳನ್ನು ನಮ್ಮ ಅನುಮೋದನೆ ಇಲ್ಲದೆ ಕಾಪಿ ಮಾಡುವುದು ಅಥವಾ ಮರುಪ್ರಕಟಣೆ ಮಾಡುವುದು ಕ್ರಿಮಿನಲ್ ಅಪರಾಧವಾಗಿದ್ದು, ಬೆಂಗಳೂರು ಕೋರ್ಟನಲ್ಲಿ ತಕ್ಕ ಕಾನೂನು ಕ್ರಮ ಕೈಗೊಳ್ಳಲಾಗುವುದು.

English summary :Municipality common meeting : discussion regarding UGD

ಪ್ರಧಾನಿ ಮೋದಿ ಅವರ ಮೂರನೇ ಅವಧಿಯ ಆರು ತಿಂಗಳೊಳಗೆ ಪಿಒಕೆ ಭಾರತದ ಭಾಗವಾಗಲಿದೆ - ಸಿಎಂ ಯೋಗಿ
ಪ್ರಧಾನಿ ಮೋದಿ ಅವರ ಮೂರನೇ ಅವಧಿಯ ಆರು ತಿಂಗಳೊಳಗೆ ಪಿಒಕೆ ಭಾರತದ ಭಾಗವಾಗಲಿದೆ - ಸಿಎಂ ಯೋಗಿ
ಸಂಸದ ಪ್ರಜ್ವಲ್‌ ರೇವಣ್ಣ  ಪೆನ್‌ಡ್ರೈವ್‌ ಪ್ರಕರಣ : ಎಲ್ಲಾ ಡಿ.ಕೆ.ಶಿವಕುಮಾರ್‌ ಪ್ಲಾನ್ - ವಕೀಲ ದೇವರಾಜೇಗೌಡ
ಸಂಸದ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ : ಎಲ್ಲಾ ಡಿ.ಕೆ.ಶಿವಕುಮಾರ್‌ ಪ್ಲಾನ್ - ವಕೀಲ ದೇವರಾಜೇಗೌಡ
 ಬೆಂಗಳೂರು ನಗರ ವ್ಯಾಪ್ತಿಯಲ್ಲಿ ರಸ್ತೆಬದಿ ಒಣಗಿರುವ ಮರಗಳು ಹಾಗೂ ರೆಂಬೆ ಕೊಂಬೆಗಳ ಮಾಹಿತಿ ಕೋರಿರುವ ಬಿಬಿಎಂಪಿ
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ರಸ್ತೆಬದಿ ಒಣಗಿರುವ ಮರಗಳು ಹಾಗೂ ರೆಂಬೆ ಕೊಂಬೆಗಳ ಮಾಹಿತಿ ಕೋರಿರುವ ಬಿಬಿಎಂಪಿ
ಸಿಎಂ ಕೇಜ್ರಿವಾಲ್ ಗೃಹ ಕಚೇರಿಯಲ್ಲಿ ಎಎಪಿ ರಾಜ್ಯಸಭಾ ಸಂಸದೆ ಮೇಲೆ ಹಲ್ಲೆ ಪ್ರಕರಣ : ದೂರು ದಾಖಲಿಸಿದ ಸ್ವಾತಿ ಮಲಿವಾಲ್
ಸಿಎಂ ಕೇಜ್ರಿವಾಲ್ ಗೃಹ ಕಚೇರಿಯಲ್ಲಿ ಎಎಪಿ ರಾಜ್ಯಸಭಾ ಸಂಸದೆ ಮೇಲೆ ಹಲ್ಲೆ ಪ್ರಕರಣ : ದೂರು ದಾಖಲಿಸಿದ ಸ್ವಾತಿ ಮಲಿವಾಲ್
ಚುನಾವಣಾ ಪ್ರಚಾರಕ್ಕೆ ಜಾಮೀನು : ಅರವಿಂದ್ ಕೇಜ್ರಿವಾಲ್ ಅವರಿಗೆ ವಿಶೇಷ ಸವಲತ್ತು ನೀಡಲಾಗಿದೆ - ಕೇಂದ್ರ ಗೃಹ ಸಚಿವ
ಚುನಾವಣಾ ಪ್ರಚಾರಕ್ಕೆ ಜಾಮೀನು : ಅರವಿಂದ್ ಕೇಜ್ರಿವಾಲ್ ಅವರಿಗೆ ವಿಶೇಷ ಸವಲತ್ತು ನೀಡಲಾಗಿದೆ - ಕೇಂದ್ರ ಗೃಹ ಸಚಿವ
ಪಾಕಿಸ್ತಾನವು ಬಳೆಗಳನ್ನು ಧರಿಸದಿದ್ದರೆ, ನಾವು ಅವರಿಗೆ ಬಳೆಗಳನ್ನು ಧರಿಸುವಂತೆ ಮಾಡುತ್ತೇವೆ - ಪ್ರಧಾನಿ ಮೋದಿ
ಪಾಕಿಸ್ತಾನವು ಬಳೆಗಳನ್ನು ಧರಿಸದಿದ್ದರೆ, ನಾವು ಅವರಿಗೆ ಬಳೆಗಳನ್ನು ಧರಿಸುವಂತೆ ಮಾಡುತ್ತೇವೆ - ಪ್ರಧಾನಿ ಮೋದಿ
 ಸರತಿ ಸಾಲಿನಲ್ಲಿ ಬಂದು ಮತ ಚಲಾಯಿಸುವಂತೆ ಕೇಳಿದ ಮತದಾರನಿಗೆ ಕಪಾಳಮೋಕ್ಷ ಮಾಡಿದ ಆಂದ್ರಪ್ರದೇಶದ ಶಾಸಕ
ಸರತಿ ಸಾಲಿನಲ್ಲಿ ಬಂದು ಮತ ಚಲಾಯಿಸುವಂತೆ ಕೇಳಿದ ಮತದಾರನಿಗೆ ಕಪಾಳಮೋಕ್ಷ ಮಾಡಿದ ಆಂದ್ರಪ್ರದೇಶದ ಶಾಸಕ
ದೆಹಲಿ ಸಿಎಂ ನಿವಾಸದಲ್ಲಿ ಆಪ್ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣ : ಭಾರಿ ಚರ್ಚೆ
ದೆಹಲಿ ಸಿಎಂ ನಿವಾಸದಲ್ಲಿ ಆಪ್ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣ : ಭಾರಿ ಚರ್ಚೆ
ಅದಾನಿ, ಅಂಬಾನಿ ಹಣದ ಬ್ಯಾಗ್ ನಿರೀಕ್ಷೆ ಬಗ್ಗೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿಕೆ- ಬಿಜೆಪಿ ವಾಗ್ದಾಳಿ
ಅದಾನಿ, ಅಂಬಾನಿ ಹಣದ ಬ್ಯಾಗ್ ನಿರೀಕ್ಷೆ ಬಗ್ಗೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿಕೆ- ಬಿಜೆಪಿ ವಾಗ್ದಾಳಿ
ಪಾಕ್ ಆಕ್ರಮಿತ ಜಮ್ಮುಕಾಶ್ಮೀರದಲ್ಲಿ ನಾಗರಿಕ ಯುದ್ಧ ಪರಿಸ್ಥಿತಿ ಉದ್ಭವ : ಗಾಳಿಯಲ್ಲಿ ಗುಂಡು, ಪೊಲೀಸರ ಪ್ರತಿಭಟನಾಕಾರರ ಘರ್ಷಣೆ
ಪಾಕ್ ಆಕ್ರಮಿತ ಜಮ್ಮುಕಾಶ್ಮೀರದಲ್ಲಿ ನಾಗರಿಕ ಯುದ್ಧ ಪರಿಸ್ಥಿತಿ ಉದ್ಭವ : ಗಾಳಿಯಲ್ಲಿ ಗುಂಡು, ಪೊಲೀಸರ ಪ್ರತಿಭಟನಾಕಾರರ ಘರ್ಷಣೆ
ಪ್ರಧಾನಿ ಮೋದಿ ಏನು ಹೇಳಿದರೂ ತೂಕವಿಲ್ಲ - ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ
ಪ್ರಧಾನಿ ಮೋದಿ ಏನು ಹೇಳಿದರೂ ತೂಕವಿಲ್ಲ - ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ
ಚುನಾವಣಾ ಪ್ರಚಾರಕ್ಕಾಗಿ ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ
ಚುನಾವಣಾ ಪ್ರಚಾರಕ್ಕಾಗಿ ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ

ನ್ಯೂಸ್ MORE NEWS...