Fri,May03,2024
ಕನ್ನಡ / English

ಯುಪಿಎ ಸಂಸದರು ನಿಜವಾಗಲೂ ಮಣಿಪುರಕ್ಕೆ ಹೋಗಿದ್ದರೆ, ಆ ವಿಷಯವನ್ನು ಚರ್ಚಿಸಲು ಏಕೆ ಇಚ್ಚಿಸುತ್ತಿಲ್ಲ? - ಕೇಂದ್ರ ಸಚಿವೆ ನಿರ್ಮಲಾ | JANATA NEWS

01 Aug 2023
1364

ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ ಅವರು ವಿರೋಧಪಕ್ಷಗಳನ್ನು ತೀವ್ರವಾಗಿ ತರಾಟೆಗೆ ತಗೆದುಕೊಂಡಿದ್ದು, "ಅವರು ಮಣಿಪುರ ವಿಷಯದಲ್ಲಿ ಕೇವಲ ರಾಜಕೀಯ ಮಾಡಲು ಇಚ್ಛಿಸುತ್ತಿದ್ದಾರೆ. ಯಾವ ರೀತಿ ಕಪ್ಪು ಬಟ್ಟೆ ಧರಿಸಿ ಅವರು ಬಂದಿದ್ದರೋ, ಅದೇ ರೀತಿ ಕಪ್ಪು ಆಲೋಚನೆ ಅವರದ್ದಾಗಿದೆ," ಎಂದು ಆರೋಪಿಸಿದರು.

ದಿನ ಕಳೆದಿದೆ, ಜನರು ಮಣಿಪುರಕ್ಕೆ ಹೋಗಿ ಅಲ್ಲಿಯ ಜನರೊಂದಿಗೆ ಮಾತನಾಡಿ ಬಂದಿದ್ದಾರೆ. ಈಗ ನಾವು ಆ ಕುರಿತು ಚರ್ಚೆ ಮಾಡುವ ಸಂದರ್ಭದಲ್ಲಿ ಅವರು ಮಣಿಪುರದಲ್ಲಿ ಏನು ಕೇಳಿಸಿಕೊಂಡರು ಅದನ್ನು ಹೇಳಬೇಕಲ್ಲವೇ? ನಿಮಗೆ ಏತಕ್ಕೆ ಸಂಕೋಚ ಇದೆ? ನೀವು ಡಿಮಾಂಡ್ ಮಾಡುತ್ತಿದ್ದೀರಿ, ಇದರ ಮೇಲೆ ಚರ್ಚೆ ಆಗಬೇಕೆಂದು. ಇವತ್ತಿಂದ ಚರ್ಚೆ ಶುರು ಮಾಡುತ್ತಿದ್ದೇವೆ. ಆದರೆ, ನೀವು ಚರ್ಚೆಗೆ ಬರಲು ತಯಾರಿಲ್ಲ! ಇದು ಅವರ ಬೂಟಾಟಿಕೆಯನ್ನು ಸ್ಪಷ್ಟವಾಗಿ ಬಹಿರಂಗಪಡಿಸುತ್ತದೆ." ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಈಗ ಮಾಧ್ಯಮಗಳ ಮುಖಾಂತರ ದೇಶದ ಜನತೆಗೆ ಮಾಹಿತಿ ತಿಳಿಸಲು ಬಯಸುತ್ತೇನೆ. ಏನೆಂದರೆ, ಇವರು ಮಣಿಪುರ್ ವಿಷಯದಲ್ಲಿನ ಮೊಸಳೆ ಕಣ್ಣೀರು ಸುರಿಸುತ್ತಿದ್ದ ಉದ್ದೇಶ ಸ್ಪಷ್ಟವಾಗಿದೆ. ಮೊದಲು ಮಣಿಪುರ್! ಮಣಿಪುರ್! ಎಂದು ಸಂಸತ್ತಿನಲ್ಲಿ ಕುಲಾಲ ಸೃಷ್ಟಿಸುವುದು ಮತ್ತು ಯಾವಾಗ ಮಣಿಪುರ್ ಬಗ್ಗೆ ಚರ್ಚೆ ಆರಂಭಿಸಿದಾಗ ಚರ್ಚೆಗೆ ಬರುವುದಿಲ್ಲ. ಯಾವ ರೀತಿ ಕಪ್ಪು ಯಾವ ರೀತಿ ಕಪ್ಪು ಬಟ್ಟೆ ಧರಿಸಿ ಬಂದಿದ್ದರು ಅದೇ ರೀತಿ ಕಪ್ಪು ಆಲೋಚನೆ ಅವರದ್ದಾಗಿದೆ, ಎಂದು ಕೇಂದ್ರ ಸಚಿವೆ ವಿರೋಧಪಕ್ಷಗಳನ್ನು ಗಂಭೀರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದಕ್ಕೂ ಮೊದಲು ಯುಪಿಎ ಸರ್ಕಾರದ ಸಮಯದಲ್ಲಿ ಮಣಿಪುರ ದಲ್ಲಿ ಬಹುತೇಕ ವರ್ಷಪೂರ್ತಿ ಬಂದ್ ಮಾಡಲಾಗಿತ್ತು. ಅವಾಗ ಒಂದೇ ದಾರಿ ಇತ್ತು, ಅದನ್ನು ಬಂದ್ ಮಾಡಲಾಗಿತ್ತು. ಅಡಿಗೆ ಅನಿಲ, ಆಹಾರ, ಔಷಧಿ ಯಾವುದು ಮಣಿಪುರ್ ಅಂದು ತಲುಪಿರಲಿಲ್ಲ. ನಾನು ಕೇಳಲು ಬಯಸುತ್ತೇನೆ, ಅಂದಿನ ಸಂದರ್ಭದಲ್ಲಿ ಸಂದರ್ಭದಲ್ಲಿ ಯುಪಿಎ ಸರ್ಕಾರದ ಯಾವ ಗೃಹಮಂತ್ರಿ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಬಾರಿಯಂತೂ ನಮ್ಮ ಮಾನ್ಯ ಪ್ರಧಾನ ಮಂತ್ರಿ ಅಮಿತ್ ಶಾ ಅವರು ಮೂರು ದಿನ ಮಣಿಪುರದಲ್ಲಿ ಒಂದು ಕ್ಯಾಂಪಿನಿಂದ ಇನ್ನೊಂದು ಕ್ಯಾಂಪಿಗೆ ಭೇಟಿ ನೀಡಿ ಜನರಿಗೆ ಏನು ಪರಿಹಾರ ನೀಡಬೇಕು ಅದನ್ನು ವ್ಯವಸ್ಥೆ ಮಾಡಿದ್ದಾರೆ. ನಾನು ಯುಪಿಎ ನಾಯಕರಿಗೆ ಕೇಳಲು ಬಯಸುತ್ತೇನೆ ಅಂದು ಯುಪಿಎ ಸರ್ಕಾರದ ಯಾವ ಗೃಹ ಮಂತ್ರಿ ಹೋಗಿದ್ದರು ಎಂದು ಯಾರು ಹೋಗಿರಲಿಲ್ಲ," ಎಂದು ಕೇಂದ್ರ ಸಚಿವೆ ನಿರ್ಮಲಾ ಜ್ಞಾಪಿಸಿದ್ದಾರೆ.

ಅವರು(ಸಂಸದರು) ಮಣಿಪುರಕ್ಕೆ ಭೇಟಿ ನೀಡಿದಾಗ ಯಾವ ಮಾಹಿತಿಯನ್ನು ಪಡೆದರು ಎಂಬುದನ್ನು ಇಲ್ಲಿ(ಸಂಸತ್ತು) ಇಡಬೇಕು. ಅವರು ಅದನ್ನು ಏಕೆ ಇಡುತ್ತಿಲ್ಲ? ಮಣಿಪುರದಲ್ಲಿ ರಾಜಕೀಯ ಮಾಡುತ್ತಿರುವ ನಿರ್ದಯಿ ಯುಪಿಎಗೆ ನಾನು ಮನವಿ ಮಾಡಲು ಬಯಸುತ್ತೇನೆ. ನೀವು ನಿಜವಾಗಿಯೂ ಮಣಿಪುರಕ್ಕೆ ಹೋಗಿದ್ದರೆ, ಈ ವಿಷಯವನ್ನು ಇಲ್ಲಿ ಚರ್ಚಿಸಲು ಏಕೆ ಬಯಸುವುದಿಲ್ಲ?, ”ಎಂದು ವಿತ್ತ ಸಚಿವೆ ನಿರ್ಮಲಾ ಪ್ರತಿಪಕ್ಷಗಳಿಗೆ ಸವಾಲು ಹಾಕಿದರು.

English summary :If UPA MPs have really gone to Manipur, why are they unwilling to discuss the matter? - Union Minister Nirmala

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ರಾಮ್ ಲಲ್ಲಾಗೆ ಪೂಜೆ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ರಾಮ್ ಲಲ್ಲಾಗೆ ಪೂಜೆ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಸೂಪರ್ಸಾನಿಕ್ ಮಿಸೈಲ್-ಅಸಿಸ್ಟೆಡ್ ರಿಲೀಸ್ ಆಫ್ ಟಾರ್ಪಿಡೊ ಹಾರಾಟ-ಪರೀಕ್ಷೆ ಯಶಸ್ವಿ
ಸೂಪರ್ಸಾನಿಕ್ ಮಿಸೈಲ್-ಅಸಿಸ್ಟೆಡ್ ರಿಲೀಸ್ ಆಫ್ ಟಾರ್ಪಿಡೊ ಹಾರಾಟ-ಪರೀಕ್ಷೆ ಯಶಸ್ವಿ
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ, ಕಾಂಗ್ರೆಸ್ ರಾಜ್ಯ ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ? - ಅಮಿತ್ ಷಾ
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ, ಕಾಂಗ್ರೆಸ್ ರಾಜ್ಯ ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ? - ಅಮಿತ್ ಷಾ
ನಮ್ಮ ಮುಸ್ಲಿಂ ಜಾತಿ ಗಣತಿ ಪ್ರಸ್ತಾಪದಿಂದಾಗಿ ಮುಸ್ಲಿಮರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ - ಸಿಎಂ ಹಿಮಂತ ಶರ್ಮಾ
ನಮ್ಮ ಮುಸ್ಲಿಂ ಜಾತಿ ಗಣತಿ ಪ್ರಸ್ತಾಪದಿಂದಾಗಿ ಮುಸ್ಲಿಮರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ - ಸಿಎಂ ಹಿಮಂತ ಶರ್ಮಾ
ಅಂಕೋಲಾ ಬಸ್ ನಿಲ್ದಾಣದ ಹಣ್ಣು ಮಾರಾಟಗಾರ್ತಿ ಮೋಹಿನಿ ಗೌಡ ಭೇಟಿ ಮಾಡಿ ಮಾತನಾಡಿದ ಪ್ರಧಾನಿ ಮೋದಿ
ಅಂಕೋಲಾ ಬಸ್ ನಿಲ್ದಾಣದ ಹಣ್ಣು ಮಾರಾಟಗಾರ್ತಿ ಮೋಹಿನಿ ಗೌಡ ಭೇಟಿ ಮಾಡಿ ಮಾತನಾಡಿದ ಪ್ರಧಾನಿ ಮೋದಿ
ರಾಜರು, ಮಹಾರಾಜರು ಭೂಗಳ್ಳರು ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ ಪ್ರಧಾನಿ ಮೋದಿ
ರಾಜರು, ಮಹಾರಾಜರು ಭೂಗಳ್ಳರು ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ ಪ್ರಧಾನಿ ಮೋದಿ
ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ವಿಚಾರ: ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನ
ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ವಿಚಾರ: ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನ
ನೀವು ರಾಷ್ಟ್ರೀಯತೆಗಿಂತ ಹೆಚ್ಚು ಆದ್ಯತೆ ವೈಯಕ್ತಿಕ ಹಿತಾಸಕ್ತಿಗೆ ಇಟ್ಟುಕೊಂಡಿದ್ದೀರಿ - ದೆಹಲಿ ಹೈಕೋರ್ಟ್ ಎಎಪಿ ಸರ್ಕಾರವನ್ನು ಖಂಡಿಸುತ್ತದೆ
ನೀವು ರಾಷ್ಟ್ರೀಯತೆಗಿಂತ ಹೆಚ್ಚು ಆದ್ಯತೆ ವೈಯಕ್ತಿಕ ಹಿತಾಸಕ್ತಿಗೆ ಇಟ್ಟುಕೊಂಡಿದ್ದೀರಿ - ದೆಹಲಿ ಹೈಕೋರ್ಟ್ ಎಎಪಿ ಸರ್ಕಾರವನ್ನು ಖಂಡಿಸುತ್ತದೆ
ಸಂದೇಶಖಾಲಿಯಲ್ಲಿ ಭಾರಿ ಶಸ್ತ್ರಾಸ್ತ್ರ ವಶ : ಟಿಎಂಸಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲು ಬಿಜೆಪಿ ಆಗ್ರಹ
ಸಂದೇಶಖಾಲಿಯಲ್ಲಿ ಭಾರಿ ಶಸ್ತ್ರಾಸ್ತ್ರ ವಶ : ಟಿಎಂಸಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲು ಬಿಜೆಪಿ ಆಗ್ರಹ
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಿಂದ ಮಸ್ಟರಿಂಗ್ ಕೇಂದ್ರಗಳ ಭೇಟಿ ಹಾಗೂ ಪರಿಶೀಲನೆ
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಿಂದ ಮಸ್ಟರಿಂಗ್ ಕೇಂದ್ರಗಳ ಭೇಟಿ ಹಾಗೂ ಪರಿಶೀಲನೆ
40 ಕೋಟಿ ಜನರ ಬಡತನ ನಿರ್ಮೂಲನೆ, ಅಧಿಕಾರಶಾಹಿ ವ್ಯವಸ್ಥೆ ಮುಗಿಸಲು ಕಠಿಣ ಆಡಳಿತ,  ಮೋದಿ ನಂಬಲಾಗದ ಕೆಲಸ ಮಾಡಿದ್ದಾರೆ - ಜೆಪಿ ಮೋರ್ಗಾನ್ ಸಿಇಒ
40 ಕೋಟಿ ಜನರ ಬಡತನ ನಿರ್ಮೂಲನೆ, ಅಧಿಕಾರಶಾಹಿ ವ್ಯವಸ್ಥೆ ಮುಗಿಸಲು ಕಠಿಣ ಆಡಳಿತ, ಮೋದಿ ನಂಬಲಾಗದ ಕೆಲಸ ಮಾಡಿದ್ದಾರೆ - ಜೆಪಿ ಮೋರ್ಗಾನ್ ಸಿಇಒ
ಪಕ್ಷದ ಚುನಾವಣಾ ಪ್ರಣಾಳಿಕೆ ಪತ್ರ ವನ್ನು ಖುದ್ದಾಗಿ ವಿವರಿಸಲು ಪ್ರಧಾನಿ ಮೋದಿ ಸಮಯ ಕೇಳಿದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ
ಪಕ್ಷದ ಚುನಾವಣಾ ಪ್ರಣಾಳಿಕೆ ಪತ್ರ ವನ್ನು ಖುದ್ದಾಗಿ ವಿವರಿಸಲು ಪ್ರಧಾನಿ ಮೋದಿ ಸಮಯ ಕೇಳಿದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ

ನ್ಯೂಸ್ MORE NEWS...