ಮೋದಿ ಗ್ರಾಫ್(ಜನಪ್ರಿಯತೆ) ಕಡಿಮೆ ಮಾಡೋಣ ... ಸ್ವಲ್ಪವೇ ಸಮಯ ಉಳಿದಿದೆ - ರೈತ ಮುಖಂಡ ಜಗಜಿತ್ ಸಿಂಗ್ | JANATA NEWS
ನವದೆಹಲಿ : ರೈತರ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿರುವ ರೈತ ಸಂಘಟನೆಗಳಲ್ಲಿ ಒಂದಾದ ಭಾರತಿ ಕಿಸಾನ್ ಯೂನಿಯನ್(ಏಕ್ತಾ ಸಿಧುಪುರ್) ಮುಖ್ಯಸ್ಥ ಜಗಜಿತ್ ಸಿಂಗ್ ದಲ್ಲೆವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹುನ್ನಾರದ ಹೇಳಿಕೆ ನೀಡಿದ್ದು, ಇದು ಅವರ ಪ್ರತಿಭಟನೆಯ ಉದ್ದೇಶವನ್ನೇ ಪ್ರಶ್ನಿಸುವಂತಿದೆ.
ಪಂಜಾಬ್ ರೈತರು ತಮ್ಮ ಪ್ರತಿಭಟನೆಯನ್ನು ಪ್ರಾರಂಭಿಸುವ ಕೆಲವೇ ದಿನಗಳ ಮೊದಲು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಸೋರಿಕೆಯಾದ ವೀಡಿಯೊದಲ್ಲಿ ಪ್ರತಿಭಟನೆಯ ಹಿಂದಿನ ಉದ್ದೇಶವನ್ನು ಬಹಿರಂಗಪಡಿಸುತ್ತದೆ.
ಪಂಜಾಬ್ ರೈತರು ಮತ್ತೊಮ್ಮೆ ಪ್ರತಿಭಟನೆಯನ್ನು ಆರಂಭಿಸಿದ್ದಾರೆ ಮತ್ತು ಶಂಭು ಮತ್ತು ಖಾನೌರಿ ಗಡಿ ಭಾಗಗಳಲ್ಲಿ ಮೊಕ್ಕಾಂ ಹೂಡಿದ್ದು, ತಮ್ಮ ಬೇಡಿಕೆಗಳನ್ನು ಅಂಗೀಕರಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ದೆಹಲಿಯತ್ತ ಮೆರವಣಿಗೆ ನಡೆಸಲು ಪ್ರಯತ್ನಿಸುತ್ತಿದ್ದಾರೆ.
ರಾಮಮಂದಿರದ 'ಪ್ರಾಣ ಪ್ರತಿಷ್ಠಾ'ದ ನಂತರ ಪ್ರಧಾನಿ ಮೋದಿಯವರ ಜನಪ್ರಿಯತೆಯ ಗ್ರಾಫ್ ಅನ್ನು ತಗ್ಗಿಸಲು ರೈತರ ಪ್ರತಿಭಟನೆಯನ್ನು ಪ್ರಾರಂಭಿಸಲಾಗಿದೆ, ಎಂದು ಜಗಜಿತ್ ಸಿಂಗ್ ದಲ್ಲೆವಾಲ್ ಹೇಳುವ ವೀಡಿಯೊ ಹೊರಬಿದ್ದಿದೆ.
ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಾ, "ರಾಮಮಂದಿರದ ನಂತರ ಪ್ರಧಾನಿ ಮೋದಿಯವರ ಗ್ರಾಫ್ ತುಂಬಾ ಹೆಚ್ಚಾಗಿದೆ ... ಅದರಿಂದ ನಷ್ಟವಾಗಿದೆ ... ಅವರ (ಮೋದಿ) ಗ್ರಾಫ್ ಹೇಗೆ ಇಳಿಯಬಹುದು? ...ಜನರಿಗೆ ನಾನು ಹಲವು ಬಾರಿ ಹೇಳಿದ್ದೇನೆ... ಕೆಲವೇ ಕೆಲವು ಅವಕಾಶಗಳಿವೆ. ಗ್ರಾಫ್ ತುಂಬಾ ಎತ್ತರದಲ್ಲಿದೆ... ಸ್ವಲ್ಪ ಸಮಯವಿದೆ(ಚುನಾವಣೆ)... ಕೆಲವೇ ದಿನಗಳಲ್ಲಿ ನಾವು ಗ್ರಾಫ್ ಅನ್ನು ಕೆಳಗೆ ತರಬಹುದೇ? ... ನಾವು ಅವರ ಗ್ರಾಫ್ ಅನ್ನು ಇಳಿಸಬೇಕಾಗಿದೆ...", ಎಂದು ಹೇಳಿದ್ದಾರೆ.