ನಿಮ್ಮ ವಿದ್ಯೆಗೆ ಮೀರಿ ನಿಮಗೆ ಖಾತೆ ಕೊಟ್ಟಿದ್ದಾರೆ, ಖಾತೆಗೆ ಸ್ವಲ್ಪ ಸಮಯವನ್ನು ವಿನಿಯೋಗ ಮಾಡಿ - ಸಚಿವ ಖರ್ಗೆ ಗೆ ಮಾಜಿ ಸಂಸದ ಸಿಂಹ ಕಿವಿಮಾತು | JANATA NEWS

ಬೆಂಗಳೂರು : ಆರ್ಎಸ್ಎಸ್ ಬ್ಯಾನ್ ಮಾಡುವ ಬಗ್ಗೆ ಮಾತನಾಡುವ ಮೂಲಕ ನಿರಂತರ ಟೀಕೆಗೆ ಗುರಿಯಾಗಿರುವ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ಮಾಜಿ ಸಂಸದ ಹಾಗೂ ಬಿಜೆಪಿ ನಾಯಕ ಪ್ರತಾಪ ಸಿಂಹ ಅವರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಮದ್ಯಮದೊಂದಿಗೆ ಈ ಕುರಿತು ಮಾತನಾಡಿರುವ ಅವರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
"2.5ವರ್ಷ ಆಯ್ತು ಈ ಸರ್ಕಾರ ಅಧಿಕಾರಕ್ಕೆ ಬಂದು... ಪ್ರಿಯಾಂಕಾ ಖರ್ಗೆ ಅವರು ತಮ್ಮ ಇಲಾಖೆ ಬಗ್ಗೆ ಮಾತಾಡಿದ್ದೇ ಇಲ್ಲ, ತಾವು ಮಾಡಿದಂತಹ ಸಾಧನೆ ಬಗ್ಗೆ ಹೇಳಿಕೊಂಡಿದ್ದೇ ಇಲ್ಲ. ವರ್ಷದಲ್ಲಿ 100 ಸಾರಿ ಪತ್ರಿಕಾಗೋಷ್ಠಿ ನಡೆಸಿದರೂ ಬಿಜೆಪಿ ಯನ್ನು ಬೈಯ್ಯೋವಂತದ್ದು.. ಆರ್ಎಸ್ಎಸ್ ಬಗ್ಗೆ ಅವಾಚ್ಯ ಶಬ್ದದಿಂದ ನಿಂದಿಸೊವಂತದ್ದು. ಇದು ಬಿಟ್ರೆ ಏನು ಕೂಡ ಅವರ ಬಾಯಿಂದ ಹೊರಗೆ ಬರೆದಿಲ್ಲ. .. ಸದನದ ಒಳಗೆ ಫೈಲ್ಸ ಪ್ರಿಯಾಂಕಾ, ಸದನದ ಹೊರಗೆ ಕೂಗುಮಾರಿ ಪ್ರಿಯಾಂಕಾ ಆಗಿ ಬಿಡ್ತೀರಿ." ಎಂದು ಹೀಯಾಳಿಸಿದ್ದಾರೆ.
"ಎನ್ ಸರ್ ನೀವು ಆರ್‌ಎಸ್‌ಎಸ್ ಬ್ಯಾನ್ ಮಾಡ್ತೀರಾ? ನೀವು ಯಾರ ಮಗಳ ಹೆಸರು ಇಟ್ಕೊಂಡಿದ್ದರಲ್ಲ ಆ ರಾಜೀವ್ ಗಾಂಧಿ ಕೂಡ ದೇಶವನ್ನು ಅಳಿದರೂ ಅವರ ಕೈಯಲ್ಲೇ ಆಗಿಲ್ಲ. ರಾಜೀವ್ ಗಾಂಧಿಯನ್ನು ಹೆತ್ತ ಅಂತಹ ಇಂದಿರಾ ಗಾಂಧಿ 16 ವರ್ಷ ದೇಶ ಅಳಿದರೂ ಅವರು ಬ್ಯಾನ್ ಮಾಡಿದ್ರು, ಆದರೆ ಬಳಿಕ ಅಧಿಕಾರ ಕಳೆದುಕೊಂಡರು. ಆರ್ಎಸ್ಎಸ್ ಮಾತ್ರ ತನ್ನ ಸಮಾಜ ಸೇವೆ ಮುಂಡುವರೆಸುತ್ತಾ ಹೋಯ್ತು. ಇಂದಿರಾ ಗಾಂಧಿಗೆ ಜನ್ಮ ಕೊಟ್ಟಂತಹ ನೆಹರೂ ಕೂಡ 17 ವರ್ಷ ಅಳಿದರೂ, ಬ್ಯಾನ್ ಮಾಡಿ ನಂತರ ಬ್ಯಾನ್ ವಾಪಸ್ ತೆಗೆದುಕೊಳ್ಳುವ ಅನಿವಾರ್ಯತೆ ಬಂತು... 1962ರ ಚೀನಾ ಯುದ್ಧದಲ್ಲಿ ಆರ್ಎಸ್ಎಸ್ ಸೇವೆಯನ್ನು ಶ್ಲಾಘಿನೆ ಮಾಡುವಂತ ಅನಿವಾರ್ಯತೆ ಬಂತು. ನೆಹರೂ ಅವರ ಮರಿಮಗಳ ಹೆಸರು ಇಟ್ಕೊಂಡು ಏನು ಮಾಡಲು ಸಾಧ್ಯವಿಲ್ಲ. ಹೆಸರಿನಲ್ಲೂ ಸ್ವಂತಂತೆ ಇಲ್ಲ. ಖರ್ಗೆ ಕೂಡ ನಿಮ್ಮ ತಂದೆ ಇಂದ ಬಂದ ಬಳುವಳಿ... ವ್ಯಕ್ತಿತ್ವದಲ್ಲೂ ಸ್ವಂತತೆ ಇಲ್ಲ..." ಎಂದು ವಾಗ್ದಾಳಿ ನಡೆಸಿದ್ದಾರೆ.
ಐಟಿಬಿಟಿ ಸಚಿವರಾಗಿ ನಿಮ್ಮ ಸಾಧನೆ ಹೇಳಿ. ಬೇರೆ ರಾಜ್ಯಗಳಿಗೆ ಕಂಪನಿಗಳು ಯಾಕೆ ಹೋಗುತ್ತಿದೆ ಏಕೆ. ನಿಮ್ಮ ಅಪ್ಪ ದೊಡ್ಡ ದೊಡ್ಡ ನಾಯಕರನ್ನ ಬಲಿ ಕೊಟ್ಟು, ಅವರ ಮುಖ್ಯಮಂತ್ರಿ ಆಸೆಯನ್ನು ಬಳಿಕೊಟ್ಟು ನಿಮ್ಮನ್ನ ಮಂತ್ರಿ ಮಾಡಿದ್ದಾರೆ... ಇದೇ ರೀತಿ ಕೂಗು ಮಾರಿ ರೀತಿ ಮಾತನಾಡುತ್ತಿದ್ರೆ, ನಿಮ್ಮನ್ನ ಯಾರೂ ಮುಖ್ಯಮಂತ್ರಿ ಮಾಡಲ್ಲ. ನಿಮ್ಮಪ್ಪನ್ನೇ ಕಾಂಗ್ರೆಸ್ ಮುಖ್ಯಮಂತ್ರಿ ಮಾಡಲಿಲ್ಲ. ಇನ್ನೂ ನಿಮ್ಮನ್ನು ಮಾಡುತ್ತಾ? ಇದನ್ನೆಲ್ಲಾ ಬಿಟ್ಟುಬಿಡಿ ಸರ್. ಆರ್‌ಎಸ್‌ಎಸ್ ಅನ್ನು ಬೈದ್ರೆ ಅಧಿಕಾರ ಸಿಗಲ್ಲ, ಎಂದು ಟೀಕಿಸಿದ್ದಾರೆ.
"ನಿಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಮಾತಾಡಿ. ನಿಮ್ಮ ವಿದ್ಯೆಗೆ ಮೀರಿ ನಿಮಗೆ ಈ ಖಾತೆ ಕೊಟ್ಟಿದ್ದಾರೆ. ಆ ಖಾತೆಗೆ ಸ್ವಲ್ಪ ಸಮಯವನ್ನು ವಿನಿಯೋಗ ಮಾಡಿ ಒಳ್ಳೆ ಕೆಲಸ ಮಾಡಿ ಸರ್", ಎಂದು ಕಿವಿಮಾತು ಹೇಳಿದ್ದಾರೆ.
"ಸಿದ್ದರಾಮಯ್ಯ ನವರು ಯುವನಿದಿ ಕೊಡುತ್ತೇನೆ ಎಂದು ಬೊಬ್ಬೆ ಹೊಡೆದು ಎರಡೂವರೆ ವರ್ಷ ಆಯ್ತು ಇಲ್ಲಿವರೆಗೂ ಪ್ರಾರಂಭನೆ ಮಾಡಿಲ್ಲ... ಹೀಗಿರುವಾಗ ಇಲಾಖೆ ಇಂದ ಏನಾದರೂ ಸಹಕಾರ ಮಾಡುವ ಬಗ್ಗೆ ಯೋಚನೆ ಮಾಡಿ ಸರ್" ಎಂದು ಹೇಳಿದ್ದಾರೆ.