ಕೇರಳ ನನ್ ಅತ್ಯಾಚಾರ ಪ್ರಕರಣ:ಬಿಷಪ್ ವಿರುದ್ಧ ಸಾಕ್ಷಿ ಹೇಳಿದ ಫಾದರ್ ಕುರಯಾಕೊಸೆ ಸಾವು | Janata news
ಜಲಂದರ್ : ಕೇರಳ ನನ್ ಅತ್ಯಾಚಾರ ಪ್ರಕರಣದಲ್ಲಿ ಬಿಷಪ್ ವಿರುದ್ಧ ಸಾಕ್ಷಿ ಹೇಳಿದ ಫಾದರ್ ಕುರಯಾಕೊಸೆ ಕತ್ತುಥರ ಮೃತ ದೇಹ ಪತ್ತೆಯಾಗಿದೆ. ಜಲಂದರ್(ಪಂಜಾಬ್)ನ ದಸುಯದಲ್ಲಿರುವ ಸೆಂಟ್ ಮೇರಿ ಚರ್ಚ್ ನಲ್ಲಿ ಫಾದರ್ ಕುರಯಾಕೊಸೆ ಮೃತ ದೇಹ ಪತ್ತೆಯಾಗಿದೆ, ಎಂದು ಹೇಳಲಾಗಿದೆ.
ಕೇರಳ ನನ್ ಅತ್ಯಾಚಾರ ಪ್ರಕರಣದ ಆರೋಪಿ ಬಿಷಪ್ ಫ್ರಾನ್ಕೋ ಮುಲಕ್ಕಲ್ ಗೆ ಬೇಷರತ್ ಬೆಲ್ ಮೇಲೆ ಬಿಡುಗಡೆಯಾದ ಬೆನ್ನಲ್ಲೇ, ಪ್ರಕರಣದಲ್ಲಿ ಬಿಷಪ್ ವಿರುದ್ಧ ಸಾಕ್ಷಿ ಹೇಳಿದ ಫಾದರ್ ಕುರಯಾಕೊಸೆ ಸಾವು ಸಾಕಷ್ಟು ಅನುಮಾನಗಳು ಏಳಲು ಕಾರಣವಾಗಿದೆ.
English summary :Kerala nun rape case: a key witness in the rape case against Bishop Franco Mulakkal, father Kuriakose Kattuthara found dead in Jalandhar today