Thu,May09,2024
ಕನ್ನಡ / English

ರಾಜ್ಯದಲ್ಲೂ‌ ಬೃಹತ್​ ತಿಮ್ಮಪ್ಪನ ದೇಗುಲ ನಿರ್ಮಾಣವಾಗಲಿದೆ, ಎಲ್ಲಿ ಗೊತ್ತೇ | Janata news

07 Jun 2019
711

ಬೆಂಗಳೂರು : ಧಾರ್ಮಿಕ ದತ್ತಿ ಇಲಾಖೆ ಅಧೀನದ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಇಂದು ಸಭೆ ನಡೆಯಿತು. ಇಂದು ಸಿಎಂ ಜೊತೆ ಮುಜರಾಯಿ ಇಲಾಖೆ ಸಚಿವ ಪಿಟಿ ಪರಮೇಶ್ವರ್ ಮತ್ತು ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ರಾಮನಗರದಲ್ಲಿ ತಿಮ್ಮಪ್ಪನ ದೇಗುಲ ನಿರ್ಮಾಣ ಮಾಡಲು ರಾಜ್ಯ ಸರ್ಕಾರದಿಂದ 15 ಎಕರೆ ಭೂಮಿ ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ. ಸಿಎಂ ಎಚ್​.ಡಿ.ಕುಮಾರಸ್ವಾಮಿ ಇಂದು ದೇಗುಲ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ. ತಿರುಪತಿ ತಿಮ್ಮಪ್ಪನ ದೇವಸ್ಥಾನದ ಮಾದರಿಯಲ್ಲೇ ರಾಮನಗರದಲ್ಲಿ ದೇವಾಲಯ ನಿರ್ಮಾಣವಾಗಲಿದೆ. ದೇವಸ್ಥಾನ ನಿರ್ಮಾಣ ಕಾರ್ಯವನ್ನು ಸಂಪೂರ್ಣವಾಗಿ ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಟ್ರಸ್ಟ್​​ ನೋಡಿಕೊಳ್ಳಲಿದೆ.

ಸಭೆಯಲ್ಲಿ ರಾಜ್ಯದ ಐತಿಹಾಸಿಕ ಹಾಗೂ ಪಾರಂಪರಿಕ ದೇವಾಲಯಗಳ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಮುಖ್ಯಮಂತ್ರಿಗಳು ಕೆಳಕಂಡ ಸೂಚನೆಗಳನ್ನು ನೀಡಿದರು.

• ಇತಿಹಾಸ ಪ್ರಸಿದ್ಧ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ 21 ಕೋಟಿ ರೂ. ಗಳ ಪ್ರಸ್ತಾವನೆ ಸಲ್ಲಿಸುವುದು.

• ಟಿ. ಟಿ.ಡಿ ಟ್ರಸ್ಟ್ ವತಿಯಿಂದ ರಾಮನಗರ ಜಿಲ್ಲೆಯಲ್ಲಿ ವೆಂಕಟೇಶ್ವರ ದೇವಸ್ಥಾನ ಹಾಗೂ ಸಮುದಾಯದ ಭವನ ನಿರ್ಮಾಣ ಕ್ಕೆ 15 ಎಕರೆ ಜಮೀನು ಗುರುತಿಸುವುದು.

• ಲೋಕೋಪಯೋಗಿ ಇಲಾಖೆ ವತಿಯಿಂದ ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯವನ್ನು 40 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ಹಾಗೂ ದೇವಸ್ಥಾನದ ಮೆಟ್ಟಿಲುಗಳ ದುರಸ್ತಿ ಕಾರ್ಯವನ್ನು ಮಲೆ ಮಹದೇಶ್ವರ ಪ್ರಾಧಿಕಾರದ ವತಿಯಿಂದ ಕೈಗೊಳ್ಳುವುದು.

• ಮುಡುಕುತೊರೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹಾಗೂ ಸಮಗ್ರ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸುವುದು.

• ತಿರುಮಲ ತಿರುಪತಿಯಲ್ಲಿ ರಾಜ್ಯ ಸರ್ಕಾರದ ವತಿಯಿಂದ 26 ಕೋಟಿ ರೂ. ವೆಚ್ಚದಲ್ಲಿ ಛತ್ರ ನಿರ್ಮಾಣ ಕಾರ್ಯವನ್ನು ಕೈಗೊಳ್ಳುವುದು.

• ಮುಂದಿನ ವರ್ಷದಲ್ಲಿ ತಲಕಾಡು ಪಂಚಲಿಂಗದರ್ಶನ ಆಚರಣೆ ನಡೆಯಲಿರುವುದರಿಂದ, ಕ್ಷೇತ್ರದಲ್ಲಿನ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಅವಶ್ಯವಿರುವೆಡೆ ಸೌಲಭ್ಯವನ್ನು ನಿರ್ಮಿಸಲು ಸೂಚನೆಗಳನ್ನು ಮುಖ್ಯಮಂತ್ರಿಗಳು ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ನೀಡಿದರು.

English summary :TirupatiTemple in Karnataka

ಪೂರ್ವದಲ್ಲಿರುವ ಭಾರತೀಯರು ಚೀನಿಯರಂತೆ ... ದಕ್ಷಿಣದ ಜನರು ಆಫ್ರಿಕಾದಂತೆ ಕಾಣುತ್ತಾರೆ - ಹಿರಿಯ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ
ಪೂರ್ವದಲ್ಲಿರುವ ಭಾರತೀಯರು ಚೀನಿಯರಂತೆ ... ದಕ್ಷಿಣದ ಜನರು ಆಫ್ರಿಕಾದಂತೆ ಕಾಣುತ್ತಾರೆ - ಹಿರಿಯ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ
ಕಾಂಗ್ರೆಸ್ ಆಡಳಿತದಲ್ಲಿ ನೀವು ವಂಚಿತರಾಗಿದ್ದೀರಾ? ಮುಸ್ಲಿಂ ಸಮುದಾಯ ಆತ್ಮಾವಲೋಕನ ಮಾಡಿಕೊಳ್ಳಬೇಕು - ಪ್ರಧಾನಿ ಮೋದಿ
ಕಾಂಗ್ರೆಸ್ ಆಡಳಿತದಲ್ಲಿ ನೀವು ವಂಚಿತರಾಗಿದ್ದೀರಾ? ಮುಸ್ಲಿಂ ಸಮುದಾಯ ಆತ್ಮಾವಲೋಕನ ಮಾಡಿಕೊಳ್ಳಬೇಕು - ಪ್ರಧಾನಿ ಮೋದಿ
ಅಯೋಧ್ಯೆಗೆ ಭೇಟಿ ನೀಡಿದ ಪ್ರಧಾನಿ ಮೋದಿ : ಮೆಗಾ ರೋಡ್‌ಶೋ ನಲ್ಲಿ ಭಾಗಿ
ಅಯೋಧ್ಯೆಗೆ ಭೇಟಿ ನೀಡಿದ ಪ್ರಧಾನಿ ಮೋದಿ : ಮೆಗಾ ರೋಡ್‌ಶೋ ನಲ್ಲಿ ಭಾಗಿ
 ಕೋವಿಡ್ ಲಸಿಕೆ ನೀಡಿದಕ್ಕಾಗಿ ಪ್ರಧಾನಿ ಮೋದಿ ಸರ್ಕಾರವನ್ನು ಟೀಕಿಸಿದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ
ಕೋವಿಡ್ ಲಸಿಕೆ ನೀಡಿದಕ್ಕಾಗಿ ಪ್ರಧಾನಿ ಮೋದಿ ಸರ್ಕಾರವನ್ನು ಟೀಕಿಸಿದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ
ರಾಯ್‌ಬರೇಲಿಯಿಂದ ಉಮೇದುವಾರಿಕೆ : ಭಾರಿ ಮುಜುಗರಕ್ಕೆ ಈಡಾದ ರಾಹುಲ್ ಗಾಂಧಿ
ರಾಯ್‌ಬರೇಲಿಯಿಂದ ಉಮೇದುವಾರಿಕೆ : ಭಾರಿ ಮುಜುಗರಕ್ಕೆ ಈಡಾದ ರಾಹುಲ್ ಗಾಂಧಿ
ಅಮೇಥಿಯಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ  ಗಾಂಧಿಗಳು : ರಾಯ್ಬರೇಲಿಯಿಂದ ಸ್ಪರ್ಧಿಸಲಿರುವ ರಾಹುಲ್ ಗಾಂಧಿ
ಅಮೇಥಿಯಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ ಗಾಂಧಿಗಳು : ರಾಯ್ಬರೇಲಿಯಿಂದ ಸ್ಪರ್ಧಿಸಲಿರುವ ರಾಹುಲ್ ಗಾಂಧಿ
ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ರಾಮ್ ಲಲ್ಲಾಗೆ ಪೂಜೆ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ರಾಮ್ ಲಲ್ಲಾಗೆ ಪೂಜೆ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಸೂಪರ್ಸಾನಿಕ್ ಮಿಸೈಲ್-ಅಸಿಸ್ಟೆಡ್ ರಿಲೀಸ್ ಆಫ್ ಟಾರ್ಪಿಡೊ ಹಾರಾಟ-ಪರೀಕ್ಷೆ ಯಶಸ್ವಿ
ಸೂಪರ್ಸಾನಿಕ್ ಮಿಸೈಲ್-ಅಸಿಸ್ಟೆಡ್ ರಿಲೀಸ್ ಆಫ್ ಟಾರ್ಪಿಡೊ ಹಾರಾಟ-ಪರೀಕ್ಷೆ ಯಶಸ್ವಿ
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ, ಕಾಂಗ್ರೆಸ್ ರಾಜ್ಯ ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ? - ಅಮಿತ್ ಷಾ
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ, ಕಾಂಗ್ರೆಸ್ ರಾಜ್ಯ ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ? - ಅಮಿತ್ ಷಾ
ನಮ್ಮ ಮುಸ್ಲಿಂ ಜಾತಿ ಗಣತಿ ಪ್ರಸ್ತಾಪದಿಂದಾಗಿ ಮುಸ್ಲಿಮರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ - ಸಿಎಂ ಹಿಮಂತ ಶರ್ಮಾ
ನಮ್ಮ ಮುಸ್ಲಿಂ ಜಾತಿ ಗಣತಿ ಪ್ರಸ್ತಾಪದಿಂದಾಗಿ ಮುಸ್ಲಿಮರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ - ಸಿಎಂ ಹಿಮಂತ ಶರ್ಮಾ
ಅಂಕೋಲಾ ಬಸ್ ನಿಲ್ದಾಣದ ಹಣ್ಣು ಮಾರಾಟಗಾರ್ತಿ ಮೋಹಿನಿ ಗೌಡ ಭೇಟಿ ಮಾಡಿ ಮಾತನಾಡಿದ ಪ್ರಧಾನಿ ಮೋದಿ
ಅಂಕೋಲಾ ಬಸ್ ನಿಲ್ದಾಣದ ಹಣ್ಣು ಮಾರಾಟಗಾರ್ತಿ ಮೋಹಿನಿ ಗೌಡ ಭೇಟಿ ಮಾಡಿ ಮಾತನಾಡಿದ ಪ್ರಧಾನಿ ಮೋದಿ
ರಾಜರು, ಮಹಾರಾಜರು ಭೂಗಳ್ಳರು ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ ಪ್ರಧಾನಿ ಮೋದಿ
ರಾಜರು, ಮಹಾರಾಜರು ಭೂಗಳ್ಳರು ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ ಪ್ರಧಾನಿ ಮೋದಿ

ನ್ಯೂಸ್ MORE NEWS...