ತಾನೂ ಕುಡಿದು, 4 ತಿಂಗಳ ಮಗುವಿಗೆ ಬಾಟಲಿನಲ್ಲಿ ಜ್ಯೂಸ್ ಎಂದು ಕ್ರಿಮಿನಾಶಕ ಕುಡಿಸಿದ ಸೋದರಿ! | Janata news
ಯಾದಗಿರಿ : ಆಟವಾಡುತ್ತಿದ್ದಾಗ ಮನೆಯಲ್ಲಿಟ್ಟಿದ್ದ ಕ್ರಿಮಿನಾಶಕವನ್ನು ಜ್ಯೂಸ್ ಎಂದು ಕುಡಿದು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಯಾದಿಗರಿ ಜಿಲ್ಲೆಯ ಕೊಡಾಲ್ ಗ್ರಾಮದಲ್ಲಿ ನಡೆದಿದೆ.
ಖೈರನ್ ಬಿ (2) ಮತ್ತು 4 ತಿಂಗಳ ಅಫ್ಸಾನಾ ಮೃತ ಮಕ್ಕಳು. ಮಕ್ಕಳು ವಿಷ ಸೇವಿಸಿದ್ದಕ್ಕೆ ಆಘಾತಗೊಂಡ ತಾಯಿಯೂ ಸಹ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಯಾದಗಿರಿ ಖಾಸಗಿ ಆಸ್ಪತ್ರೆಯಲ್ಲಿ ಶಹನಹಾಜ್ ರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಖೈರನ್ಬಿ ತನ್ನ ತಂಗಿ ಅಫ್ಸಾನಾಳನ್ನು ಆಟವಾಡಿಸುತ್ತಿದ್ದಳು. ಈ ವೇಳೆ ಜ್ಯೂಸ್ ಎಂದು ಮೊದಲಿಗೆ ಬಾಟಲಿನಲ್ಲಿ ಹಾಕಿ ಮಗುವಿಗೆ ಕುಡಿಸಿದ್ದಾಳೆ. ನಂತರ ತಾನೂ ಕುಡಿದಿದ್ದಾಳೆ. ಈ ವೇಳೆ ತಾಯಿ ಶಹನಹಾಜ್ ಮನೆಯೊಳಗೆ ಕೆಲಸ ಮಾಡುತ್ತಿದ್ದರು. ಹೊರಗೆ ಬಂದು ನೋಡಿದಾಗ ಮಕ್ಕಳು ಒದ್ದಾಡುತ್ತಿದ್ದವು. ಆಗ ಮಕ್ಕಳು ವಿಷ ಸೇವಿಸಿದ್ದಕ್ಕೆ ಆಘಾತಗೊಂಡ ಶಹನಹಾಜ್ ತಾನೂ ವಿಷ ಕುಡಿದಿದ್ದಾರೆ.
ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಅಸ್ವಸ್ಥ ತಾಯಿ ಶಹೇನಾಜ್ ಯಾದಗಿರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.