ಕ್ವಾರಂಟೈನ್ ಸೆಂಟರ್ ನಲ್ಲೇ ಅಪ್ರಾಪ್ತ ವಯಸ್ಕಳಿಗೆ ಹೆರಿಗೆ! | Janata news
ಕಲಬುರಗಿ : ನಗರದ ಶಹಬಾದ್ ನಗರದ ಕ್ವಾರಂಟೈನ್ ಸೆಂಟರ್ನಲ್ಲಿ ಅಪ್ರಾಪ್ತೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ, ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈಕೆ ಮಹಾರಾಷ್ಟ್ರದ ಕೊಲ್ಹಾಪುರ ಬಳಿಯ ಸೋಮನಳ್ಳಿಯಲ್ಲಿ ವಾಸವಾಗಿದ್ದಳು. ಮೇ 17ರಂದು ಕಾರ್ಮಿಕರೊಂದಿಗೆ ಕಲಬುರಗಿಗೆ ವಾಪಸಾಗಿದ್ದಾಳೆ. ಈಕೆಯ ಜತೆಗೆ ತಾಯಿ ಹಾಗೂ ಸಹೋದರನನ್ನು ಇಂದಿರಾನಗರ ಮಡ್ಡಿ-1ರ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ಮಂಗಳವಾರ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಾಹಿತಿ ತಿಳಿದ ತಹಶೀಲ್ದಾರ್ ಹಾಗೂ ಅಧಿಕಾರಿಗಳು ಭೇಟಿ ನೀಡಿದ್ದು, ತಾಯಿ ಮತ್ತು ಮಗುವನ್ನು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕಳುಹಿಸಿದ್ದಾರೆ ಎಂದು ಹೇಳಲಾಗಿದೆ.
English summary :Kalburgi