ರಾಕಿಂಗ್ ಸ್ಟಾರ್ ಯಶ್ ಮನೆಗೆ ಡಿಕ್ಕಿ ಹೊಡೆದ ಟ್ರ್ಯಾಕ್ಟರ್! | Janata news
ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಮನೆಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ. ಈ ಘಟನೆ ಮಂಗಳವಾರ ರಾತ್ರಿ ನಡೆದಿದೆ. ನಿನ್ನೆ ರಾತ್ರಿ ಹೊಸಕೆರೆಹಳ್ಳಿ ಯಲ್ಲಿರುವ ಯಶ್ ಮನೆ ಕಾಂಪೌಂಡ್ ಟ್ರ್ಯಾಕ್ಟರ್ವೊಂದು ಬಂದು ಡಿಕ್ಕಿ ಹೊಡೆದಿದೆ.
ಟ್ರ್ಯಾಕ್ಟರ್ನ ಬ್ರೇಕ್ ಫೇಲ್ಯೂರ್ ಉಂಟಾದ ಪರಿಣಾಮ ಹೊಸಕೆರೆಹಳ್ಳಿಯಲ್ಲಿರೋ ಯಶ್ ಮನೆಯ ಕಾಂಪೌಂಡ್ಗೆ ಡಿಕ್ಕಿಯಾಗಿದೆ. ಈ ವೇಳೆ ಮನೆಯ ಮುಂದೆ ನಿಲ್ಲಿಸಿದ್ದ ಒಂದು ಬೈಕ್ ಜಖಂ ಆಗಿದೆ. ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ.
ಟ್ರ್ಯಾಕ್ಟರ್ ಗುದ್ದಿದ ಪರಿಣಾಮ ಒಂದು ಬೈಕ್ ಜಖಂ ಆಗಿದೆ. ಟ್ರ್ಯಾಕ್ಟರ್ ಮುಂಭಾಗಕ್ಕೆ ಸ್ವಲ್ಪ ಹಾನಿಯಾಗಿದೆ. ಯಶ್ ಮನೆಯ ಮುಂದಿನ ರಸ್ತೆ ಇಳಿಜಾರು ಇರುವ ಕಾರಣ ಬ್ರೇಕ್ ಫೇಲ್ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಕಾಂಪೌಂಡ್ ಗುದ್ದಿದೆ.
ಘಟನೆಯ ಬಗ್ಗೆ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬನಶಂಕರಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸದ್ಯಕ್ಕೆ ನಟ ಯಶ್ ಹಾಗೂ ಕುಟುಂಬ ಈ ಮನೆಯಲ್ಲಿ ವಾಸ ಮಾಡುತ್ತಿಲ್ಲ. ಹೀಗಾಗಿ, ಘಟನಾ ಸ್ಥಳದಲ್ಲಿ ನಟ ಯಶ್ ಕುಟುಂಬ ವಾಸವಿರಲಿಲ್ಲ.