ಬೀದರ್ನಲ್ಲಿ ಕೊರೊನಾ ಮರಣ ಮೃದಂಗ: ಡೆಡ್ಲಿ ವೈರಸ್ಗೆ ಒಂದೇ ದಿನ 9 ಬಲಿ! | Janata news
ಬೀದರ್ : ಜಿಲ್ಲೆಯಲ್ಲಿ ಕೊರೊನಾ ಮರಣ ಮೃದಂಗ ಮುಂದುವರೆದಿದೆ. ಇಂದು ಒಂದೇ ದಿನ ಕೊರೊನಾಗೆ 9 ಮಂದಿ ಸಾವನ್ನಪ್ಪಿದ್ದಾರೆ.
ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ 7 ಜನರನ್ನು ಬಲಿ ಪಡೆದಿದ್ದ ಕೊರೊನಾಗೆ ಭಾನುವಾರ ಮತ್ತೆ 9 ಜನರು ಸಾವನ್ನಪ್ಪಿದ್ದಾರೆ. ದಿನೇ ದಿನೇ ಸಾವಿನ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆ ಗಡಿ ಜಿಲ್ಲೆಯ ಜನರಲ್ಲಿ ಆತಂಕ ಮುಂದುವರೆದಿದೆ.
ಜಿಲ್ಲಾಡಳಿತದಿಂದ ಬಿಡುಗಡೆಯಾದ ಹೆಲ್ತ್ ಬುಲೆಟಿನ್ ಪ್ರಕಾರ ಮೂವರು ಮಹಿಳೆಯರು ಹಾಗೂ 6 ಪುರುಷರು ಸೋಂಕಿಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಬೀದರ್ ನಗರದಲ್ಲಿ 3, ಭಾಲ್ಕಿಯಲ್ಲಿ 2, ಬಸವಕಲ್ಯಾಣದಲ್ಲಿ 3 ಮತ್ತು ಹುಮ್ನಾಬಾದ್ನಲ್ಲಿ ಒಬ್ಬರು ಅಸುನೀಗಿದ್ದಾರೆ. ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಇದೀಗ 36 ಕ್ಕೇರಿದೆ.
English summary :Corona Virus in Bidar