ಗಲ್ವಾನ್ ಘರ್ಷಣೆಯಲ್ಲಿ 100ಕ್ಕೂ ಹೆಚ್ಚು ಚೀನಾದ ಸೈನಿಕರ ಸಾವು : ಜಿಯಾನ್ಲಿ ಯಾಂಗ್ | Janata news
ವಾಷಿಂಗ್ಟನ್ : ಗಾಲ್ವಾನ್ ಘರ್ಷಣೆಯಲ್ಲಿ 100ಕ್ಕೂ ಹೆಚ್ಚು ಚೀನಾದ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ, ಎಂದು ಚೀನಾದ ಮಾಜಿ ಮಿಲಿಟರಿ ಅಧಿಕಾರಿ ಜಿಯಾನ್ಲಿ ಯಾಂಗ್ ಬಹಿರಂಗಪಡಿಸಿದ್ದಾರೆ.
ಚೀನಾದ ಮಾಜಿ ಮಿಲಿಟರಿ ಅಧಿಕಾರಿ ಮತ್ತು ಚೀನೀ ಕಮ್ಯುನಿಸ್ಟ್ ಪಕ್ಷದ ನಾಯಕನ ಮಗ ಜಿಯಾನ್ಲಿ ಯಾಂಗ್ ಸಂವೇದನಾಶೀಲ ಆರೋಪ ಮಾಡಿದ್ದಾರೆ. ಯಾಂಗ್ ಪ್ರಕಾರ, ಜೂನ್ 15 ರ ರಾತ್ರಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವಿನ ಭೀಕರ ಸಂಘರ್ಷದಲ್ಲಿ 100 ಕ್ಕೂ ಹೆಚ್ಚು ಚೀನಾದ ಸೈನಿಕರು ಕೊಲ್ಲಲ್ಪಟ್ಟರು. ಆದರೆ ಚೀನಾದ ಆಡಳಿತವು ಈ ಮಾಹಿತಿಯನ್ನು ಚೀನಾದ ಜನರಿಂದ ಮರೆಮಾಡುತ್ತಿದೆ. ಗಾಲ್ವಾನ್ ಕಣಿವೆಯಲ್ಲಿ ಕೊಲ್ಲಲ್ಪಟ್ಟ ಸೈನಿಕರ ಮಾಹಿತಿಯನ್ನು ಬಹಿರಂಗಪಡಿಸಿದರೆ, ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತ ಸೈನಿಕರು ದಂಗೆ ಏಳಬಹುದು ಎಂದು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆತಂಕ ವ್ಯಕ್ತಪಡಿಸಿದ್ದಾರೆ. ಇದು ಮಾತ್ರವಲ್ಲದೆ ಕಮ್ಯುನಿಸ್ಟ್ ಪಕ್ಷದೊಳಗೆ ದಂಗೆ ಉಂಟಾಗಬಹುದು, ಎಂದು ಹೇಳಿದ್ದಾರೆ.
ದಿ ವಾಷಿಂಗ್ಟನ್ ಪೋಸ್ಟ್‌ನ ಅಭಿಪ್ರಾಯದ ಅಂಕಣದಲ್ಲಿ ಯಾಂಗ್ ಅವರು, ಸೈನಿಕರನ್ನು ಕಳೆದುಕೊಂಡಿದ್ದೇವೆ ಎಂದು ಒಪ್ಪಿಕೊಳ್ಳಲು ಬೀಜಿಂಗ್ ಭಯಪಡುತ್ತಿದೆ, ಅದರಲ್ಲೂ ತನ್ನ ಎದುರಾಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ, ಎಂದು ಬರೆದಿದ್ದಾರೆ. ಚೀನಾದ ಕಮ್ಯುನಿಸ್ಟ್ ಪಕ್ಷದ ಆಡಳಿತವನ್ನು ಪಣಕ್ಕಿಡಬಹುದಾದ ದೊಡ್ಡ ಅಶಾಂತಿಗೆ ಇದು ಕಾರಣವಾಗಬಹುದು ಎಂದು ಅವರು ಒಪ್ಪಿಕೊಳ್ಳುತ್ತಾರೆ, ಎಂದು ಅವರು ಬರೆದಿದ್ದಾರೆ.
ಆದರೆ ವಾಸ್ತವದಲ್ಲಿ, ಚೀನಾದ ಕಡೆಯಿಂದ ಸಂಭವಿಸಿದ ಸಾವುನೋವುಗಳಿಗೆ ಸಂಬಂಧಿಸಿದಂತೆ, ಇದುವರೆಗೂ ಯಾವುದೇ ಅಧಿಕೃತ ಪ್ರಕಟಣೆ ಮಾಡಿಲ್ಲ. ಭಾರತೀಯ ಮೂಲಗಳ ಪ್ರಕಾರ ಚೀನಿ 43 ಸೈನಿಕರನ್ನು ಕಳೆದುಕೊಂಡು ಹೆಚ್ಚು ಸಾವುನೋವುಗಳನ್ನು ಅನುಭವಿಸಿದ್ದಾರೆ ಎಂಬುದು ಖಚಿತವಾದರೂ, ಈ ಸಂಖ್ಯೆಯ ಬಗ್ಗೆ ಅಧಿಕೃತವಾಗಿ ಪ್ರಕಟಣೆ ಇಲ್ಲ. ಚೀನಾ ಈ ಸಂಗತಿಯನ್ನು ಎಂದಿಗೂ ಅಂಗೀಕರಿಸುವುದಿಲ್ಲ ಮತ್ತು ಗಾಲ್ವಾನ್ ಕಣಿವೆಯ ಘರ್ಷಣೆಯಲ್ಲಿ ಚೀನಾದ ಕಡೆಯ 100 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಸೂಚಿಸುವ ಬೇರೆ ಯಾವುದೇ ಮಾಹಿತಿಯೂ ಸಿಕ್ಕಿಲ್ಲ.