ಶಾಲಾ ಆವರಣದಲ್ಲಿ ಭೂ ಕುಸಿತ : ತಪ್ಪಿದ ಭಾರಿ ಅನಾಹುತ! | Janata news
ಗದಗ : ಶಾಲಾ ಆವರಣದಲ್ಲಿ ಭೂ ಕುಸಿತವಾಗಿದ್ದು, ಭಾರೀ ಅನಾಹುತವೊಂದು ತಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ನಗರದ ವೀರನಾರಾಯಣ ದೇವಸ್ಥಾನದ ಬಳಿಯ ಸರ್ಕಾರಿ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ನಂಬರ್-2 ರ ಆವರಣದಲ್ಲಿ ಈ ಘಟನೆ ನಡೆದಿದೆ. ಶಾಲೆಗೆ ರಜೆ ಇರುವುದರಿಂದ ಭಾರಿ ಅನಾಹುತ ತಪ್ಪಿದೆ.
ಸುಮಾರು 30 ಅಡಿ ಭೂ ಕುಸಿತವಾಗಿದ್ದು, ಶಿಕ್ಷಕರು ಹಾಗೂ ಸ್ಥಳೀಯರು ಶಾಲೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
English summary :Gadag