ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಜೀರಿಗೆ ನೀರು ಕುಡಿದರೆ ಆಗುವ ಲಾಭ ಗೊತ್ತೇ? | Janata news
ಬೆಂಗಳೂರು : ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿಯುವುದರಿಂದ ಆಗುವ ಲಾಭ ಏನು ಗೊತ್ತಾ? ಜೀರಿಗೆ ಆರೋಗ್ಯವನ್ನು ಸಂರಕ್ಷಿಸುವ ಔಷಧಿ. ಇದರಲ್ಲಿ ಅನಾರೋಗ್ಯವನ್ನ ನಿವಾರಿಸುವ ಔಷಧಿ ಗುಣಗಳು ಇದೆ.
ಮುಂಜಾನೆ ಬರಿ ಹೊಟ್ಟೆಯಲ್ಲಿ ಕುಡಿದರೆ ಎಷ್ಟೋ ಅನಾರೋಗ್ಯ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು.
ಒಂದು ಬಟ್ಟಲಲ್ಲಿ ನೀರು ಹಾಕಿ, ನಂತರ ಜೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಅದನ್ನು ಶೋಧಿಸಿಕೊಂಡು ಉಗುರು ಬೆಚ್ಚಗೆ ಇರುವ ಜೀರಿಗೆ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.
ಎರಡು ಚಿಕ್ಕ ಚಮಚ ಜೀರಿಗೆ ಬೀಜವನ್ನು ರಾತ್ರಿಯಿಡೀ ಒಂದು ಕಪ್ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆದ್ದ ಬಳಿಕ ಪ್ರಥಮ ಆಹಾರವಾಗಿ ಮಣ್ಣಿನ ಹಳದಿ ಬಣ್ಣಕ್ಕೆ ತಿರುಗಿರುವ ಈ ನೀರನ್ನು ಸೇವಿಸಿ.
- ಕುಡಿದರೆ ದೇಹವು ತಂಪಾಗಿರುತ್ತದೆ ಮತ್ತು ಇದು ದೇಹದಲ್ಲಿ ಉಷ್ಣತೆಯನ್ನು ಕಾಪಾಡಲು ನೆರವಾಗುವುದು. ಇದು ತೂಕ ಇಳಿಸಲು ಕೂಡ ತುಂಬಾ ನೆರವಾಗುವುದು.
- ಜೀರಿಗೆಯು ಆಹಾರದ ನಾರಿನಾಂಶವನ್ನು ಹೊಂದಿದ್ದು, ಜೀರ್ಣಕ್ರಿಯೆಗೆ ಇದು ಸಹಕಾರಿ ಮತ್ತು ಹಲವಾರು ಆರೋಗ್ಯ ಲಾಭಗಳನ್ನು ಇದು ನೀಡುವುದು. ಜೀರಿಗೆ ನೀರನ್ನು ದಿವಸ ಕುಡಿಯೋದರಿಂದ ಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೋಗುತ್ತವೆ. ಜೀರ್ಣಕೋಶ ಶುಭ್ರವಾಗುತ್ತದೆ. ಮಲಭಾದೆ ಸಮಸ್ಯೆ, ಅಸಿಡಿಟಿಯಂತಹ ಸಮಸ್ಯೆಗಳು ದೂರವಾಗುತ್ತದೆ.
- ಕಬ್ಬಿನಾಂಶ ಮತ್ತು ಆಹಾರದ ನಾರಿನಾಂಶವನ್ನು ಹೊಂದಿರುವಂತಹ ಜೀರಿಗೆಯು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಆರೋಗ್ಯವಾಗಿಡುವುದರ ಜತೆಗೆ ಪ್ರತಿರೋಧಕ ಶಕ್ತಿ ವೃದ್ಧಿಸುವುದು.
- ಜೀರಿಗೆಯು ಚಯಾಪಚಯವನ್ನು ಹೆಚ್ಚಿಸಿ ಕ್ಯಾಲರಿ ದಹಿಸುವಂತೆ ಮಾಡುವುದು ಮತ್ತು ವೇಗವಾಗಿ ತೂಕ ಇಳಿಸಲು ಇದು ಸಹಕಾರಿ ಆಗಿರುವುದು.
- ಡಯಾಬಿಟಿಸ್ ಇರುವ ವ್ಯಕ್ತಿಗಳಿಗೆ ಜೀರಿಗೆ ನೀರು ಶಕ್ತಿಯುತ ಔಷಧಿ. ಈ ನೀರು ಕುಡಿಯುವುದರಿಂದ ರಕ್ತದ ಶುಗರ್ ಲೆವೆಲ್ ಕಡಿಮೆ ಆಗುತ್ತದೆ.
- ಅಸ್ತಮಾ ಮತ್ತು ಬ್ರಾಂಕೈಟಿಸ್ ಗೆ ಪರಿಣಾಮಕಾರಿ ಆಗಿರುವುದು. ಕಫಗಟ್ಟುವುದನ್ನು ನಿವಾರಿಸು ವಂತಹ ಅಂಶವು ಜೀರಿಗೆಯಲ್ಲಿದೆ ಮತ್ತು ಇದು ಉಸಿರಾಟದ ವ್ಯವಸ್ಥೆಯನ್ನು ಕಫ ನಿಲ್ಲುವುದನ್ನು ತಡೆಯುವುತ್ತದೆ.
- ಕಿಡ್ನಿನಲ್ಲಿ ಕಲ್ಲು ಇದ್ದರೆ ಕರಗುತ್ತದೆ. ಹೊಟ್ಟೆ ನೋವು ಅಥವಾ ತಲೆ ತಿರುಗುತ್ತಿದ್ದರೆ ಜೀರಿಗೆ ನೀರನ್ನು ಕುಡಿಯಬೇಕು.