ಒಡೆದ ಹಿಮ್ಮಡಿಯಿಂದ ಬೇಸತ್ತಿದಿರಾ? ಓದಿ .. ಇಲ್ಲಿದೆ ಪರಿಹಾರ | Janata news
ಬೆಂಗಳೂರು : ಚಳಿಗಾಲದಲ್ಲಿ ಸರಿಯಾಗಿ ಪೋಷಣೆ ಮಾಡದಿದ್ದರೆ ನಿಮ್ಮ ಹಿಮ್ಮಡಿ ಚರ್ಮ ಶುಷ್ಕವಾಗಿ ಗಟ್ಟಿಯಾದಾಗ ಹಿಮ್ಮಡಿ ಬಿರುಕು ಬಿಡುತ್ತದೆ. ಅದು ತುಂಬಾ ಕಿರಿ ಕಿರಿ ಯನ್ನು ಉಂಟು ಮಾಡುವುದರ ಜೊತೆ ಚಂದವನ್ನು ಕೆಡಿಸುತ್ತದೆ. ಒಡೆದ ಹಿಮ್ಮಡಿಯನ್ನು ಹೇಗೆ ಕಾಪಾಡಿಕೊಳ್ಳುವುದು ಎಂಬುವದರ ಬಗ್ಗೆ ಮಾಹಿತಿ ಇಲ್ಲಿದೆ.
ಒಂದು ದೊಡ್ಡ ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಮತ್ತು ಶಾಂಪುವನ್ನು ಮಿಶ್ರಣ ಮಾಡಿ ನಿಮ್ಮ ಪಾದವನ್ನು ಅದರಲ್ಲಿ ಇಡಿ. ಹತ್ತು ನಿಮಿಷ ಹಾಗೆ ನಿಮ್ಮ ಪಾದವನ್ನು ನೆನೆಯಲು ಬಿಟ್ಟು ನಂತರ ಒಂದು ಟೂತ್ ಬ್ರಾಸ್ ನಿಂದ ಚೆನ್ನಾಗಿ ಉಜ್ಜಿ ಸ್ವಚ್ಚಮಾಡಿಕೊಳ್ಳಿ. ನಂತರ ಒಂದು ಒಣ ಬಟ್ಟೆಯಿಂದ ವರೆಯಿಸಿಕೊಂಡು ನಂತರ ಕೆಳಗಿನ ವಿಧಾನವನ್ನು ಪ್ರಯೋಗಿಸಿ.
ವಿಧಾನ 1-
೧ ಚಮಚ ನಿಂಬೆ ರಸ
೧ ಚಮಚ ವ್ಯಾಸಲಿನ್
ನಿಂಬೆ ರಸ ಮತ್ತು ವ್ಯಾಸಲಿನ್ ಅನ್ನು ಮಿಶ್ರಣ ಮಾಡಿ ನಿಮ್ಮ ಪಾದಕ್ಕೆ ಹಚ್ಚಿಕೊಂಡು 15 ನಿಮಿಷ ಮಸಾಜ್ ಮಾಡಿಕೊಳ್ಳಿ, ನಂತರ ನಿಮ್ಮ ಪಾದವನ್ನು ಹತ್ತಿ ಅಥವಾ ಕವರ್ ನಿಂದ ಪ್ಯಾಕ್ ಮಾಡಿ. ಇಡಿ ರಾತ್ರಿ ಅದನ್ನು ಹಾಗೆ ಬಿಡಿ. ಬೆಳಿಗ್ಗೆ ಎದ್ದು ಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆಯಿರಿ.
ವಿಧಾನ 2-
1 ಚಮಚ ಕೊಬ್ಬರಿ ಎಣ್ಣೆ
2 ಚಮಚ ವ್ಯಾಸಲಿನ್ ಜೆಲ್
2 ವಿಮಮಿನ್ ಇ ಕ್ಯಾಪ್ಸ್ಯುಲ್
ಮೂರನ್ನು ಮಿಶ್ರಣ ಮಾಡಿ ನಿಮ್ಮ ಪಾದಕ್ಕೆ ಹಚ್ಚಿ ಸ್ವಲ್ಪ ಮಸಾಜ್ ಮಾಡಿ ಕಾಲು ಚೀಲ ಹಾಕಿಕೊಂಡು ಮಲಗಿ. ಬೆಳಿಗ್ಗೆ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಪಾದ ಹೆಚ್ಚು ಒಡೆದಿದ್ದರೆ ಪ್ರತಿದಿನ ಮಾಡಿಕೊಳ್ಳಿ ಇಲ್ಲ ಅಂದರೆ ವಾರದಲ್ಲಿ ಮೂರು ಬಾರಿ ಮಾಡಿಕೊಳ್ಳಿ.
ವಿಧಾನ 3-
ಸಾಸಿವೆ ಎಣ್ಣೆ 2 ಚಮಚ
ಅರಿಶಿನದ ಪುಡಿ ಒಂದು ಚಮಚ
ಎರಡನ್ನು ಮಿಶ್ರಣ ಮಾಡಿ ಪಾದಕ್ಕೆ ಹಚ್ಚಿಕೊಂಡು ಸಾಕ್ಸ್ ಹಾಕಿ ಮಲಗಿ. ಬೆಳಿಗ್ಗೆ ತೊಳೆದುಕೊಳ್ಳಿ. ವಾರಕ್ಕೆ ಒಮ್ಮೆ ಮಾಡಿ ದರೆ ಸಾಕು.