ಇದನ್ನಾ ಕುಡಿದು 20 ದಿನದಲ್ಲಿ ತೂಕ ಕಡಿಮೆ ಮಡಬಹುದು ಹೇಗೆ ಗೊತ್ತಾ?? | Janata news
ಬೆಂಗಳೂರು : ತೂಕ ಇಳಿಸುವುದು ಅಷ್ಟು ಸುಲಭದ ಕಾರ್ಯವಲ್ಲ, ಅಂತೆಯೇ ಅಸಾಧ್ಯವೂ ಅಲ್ಲ. ದೃಢ ಮನಸ್ಸು, ಸತತ ಪ್ರಯತ್ನ ಮತ್ತು ಸರಿಯಾದ ಕ್ರಮಗಳನ್ನು ಅನುಸರಿಸುವ ಮೂಲಕ ಮಾತ್ರವೇ ಇದನ್ನು ಸಾಧಿಸಬಹುದು.
ನೀವು ಕೆಲವೊಂದು ಆಹಾರ ಕ್ರಮವನ್ನು ತುಂಬಾ ಕ್ರಮಬದ್ಧವಾಗಿ ಪಾಲಿಸಿಕೊಂಡು ಹೋಗಿ ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸಬಹುದು.ಹತ್ತು ದಿನಗಳಲ್ಲಿ ತೂಕ ಇಳಿಸಿಕೊಳ್ಳುವುದು ಹೇಗೆ ಎಂದು ತಿಳಿಯಿರಿ.
ತುಳಸಿಯ ಎಲೆಗಳಲ್ಲಿರುವ ಪೋಷಕಾಂಶಗಳು ದೇಹದ ಜೀವ ರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುತ್ತವೆ. ಜೀವ ರಾಸಾಯನಿಕೆ ಕ್ರಿಯೆ ಶೀಘ್ರವಾದಷ್ಟೂ ಬೇಗಬೇಗನೇ ಕ್ಯಾಲೋರಿಗಳೂ ಕರಗುತ್ತವೆ.
- ನೀರನ್ನು ಒಂದು ಚಿಕ್ಕ ಪಾತ್ರೆಯಲ್ಲಿ ಕುದಿಸಿ.
- ತುಳಸಿ ಎಲೆಯನ್ನು ತೊಳೆದುಕೊಂಡು, ಕುದಿಯುತ್ತಿರುವ ನೀರಿಗೆ ತುಳಸಿ ಎಲೆಗಳನ್ನು ಕೈಗಳಿಂದ ಕೊಂಚವೇ ಜಜ್ಜಿ ಹಾಕಿ.
- ಒಂದು ನಿಮಿಷ ಈ ನೀರನ್ನು ಹಾಗೇ ಬಿಡಿ.
- ಬಳಿಕ ಈ ನೀರನ್ನು ಸೋಸಿ ಲೋಟದಲ್ಲಿ ಸಂಗ್ರಹಿಸಿ
- ಇದಕ್ಕೆ ಒಂದು ಚಿಕ್ಕ ಚಮಚ ಜೇನು ಬೆರೆಸಿ.
- ನಿಮ್ಮ ದಿನದ ಟೀ ಕಾಫಿ ಬದಲಿಗೆ ಈ ತುಳಸಿ ಟೀಯನ್ನೇ ಸೇವಿಸಿ.
ತುಳಸಿ ಟೀ ಕುಡಿಯುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ಕಲ್ಮಶಗಳೂ ದೇಹದಿಂದ ಪರಿಪೂರ್ಣಾವಾಗಿ ವಿಸರ್ಜಿಸಲ್ಪಡುವ ಕಾರಣ ತೂಕ ಇಳಿಕೆಯ ಪ್ರಕ್ರಿಯೆಗೆ ಹೆಚ್ಚಿನ ಪ್ರೋತ್ಸಾಹ ದೊರಕುತ್ತದೆ.