ಸೇನಾ ಪೂರ್ವ ತರಬೇತಿ ನೀಡಲು ನಿವೃತ್ತ ಸೇನಾ ಅಧಿಕಾರಿಗಳಿಂದ ಅರ್ಜಿ ಆಹ್ವಾನ | JANATA NEWS
ಕಾರವಾರ : ಸೇನೆ ಸೇರಬಯಸುವ ಕರ್ನಾಟಕದ ಯುವ ಜನತೆಗೆ, ಸೇನಾ ಪೂರ್ವಭಾವಿ ತರಬೇತಿಯನ್ನು ನೀಡುವ ಸಲುವಾಗಿ ಓರ್ವ ಮಾಜಿ ಸೇನಾ ಅಧಿಕಾರಿ ಮತ್ತು ದೈಹಿಕ ಶಿಕ್ಷಣ ತರಬೇತಿ ಹೊಂದಿರುವ ಮೂರು ಹುದ್ದೆಗಳಿಗೆ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅರ್ಹ ಮಾಜಿ ಸೇನಾ ಅಧಿಕಾರಿಗಳು/ ಮಾಜಿ ಸೈನಿಕರು ಈ ಮೇಲ್ sainik.kwr@gmail.com ಮೂಲಕ ತಮ್ಮ ಹೆಸರುಗಳನ್ನು ಜು. 19ರೊಳಗಾಗಿ ಸಲ್ಲಿಸಬೇಕು. ಆಯ್ಕೆಯಾದ ನಿವೃತ್ತ ಸೇನಾ ಅಧಿಕಾರಿಗೆ- 60 ಸಾವಿರ ಹಾಗೂ ನಿವೃತ್ತ ಸೈನಿಕರು (ದೈಹಿಕ ಶಿಕ್ಷಣ ತರಬೇತಿ)-30 ಸಾವಿರ ರೂಪಾಯಿ ಮಾಸಿಕ ಗೌರವ ಧನ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕಾರವಾರದ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೆಶಕರ ಕಚೇರಿ ದೂರವಾಣಿ ಸಂಖ್ಯೆ 08382-226538 ಗೆ ಸಂಪರ್ಕಿಸಲು ಕೋರಿದೆ.
English summary :Application invited from Retired Army Officers for Pre-Army Training