ಅಗ್ನಿಪಥ ನೇಮಕಾತಿ ರ‍್ಯಾಲಿ ಸೆಪ್ಟೆಂಬರ್ ೧ ರಿಂದ ಆರಂಭ : ಸಂಪೂರ್ಣ ಮಾಹಿತಿ | JANATA NEWS
ಕಾರವಾರ : ಭೂಸೇನಾ ನೇಮಕಾತಿ ಪ್ರಾಧಿಕಾರ ವತಿಯಿಂದ ಅಗ್ನಿಪಥ್ ಯೋಜನೆಯಡಿಯಲ್ಲಿ ಸೆ.೧ ರಿಂದ ಸೆ.೨೦ ರವರೆಗೆ ಉತ್ತರ ಕನ್ನಡ ಸೇರಿದಂತೆ ಒಟ್ಟು ೧೦ ಜಿಲ್ಲೆಗಳ ಯುವಕರಿಗಾಗಿ ಹಾವೇರಿಯಲ್ಲಿ ನೇಮಕಾತಿ ರ‍್ಯಾಲಿ ಆಯೋಜಿಸಲಾಗಿದೆ.
ಉತ್ತರಕನ್ನಡ, ಬಾಗಲಕೋಟೆ, ವಿಜಯಪುರ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಯುವಕರಿಗಾಗಿ ನೇಮಕಾತಿ ರ‍್ಯಾಲಿಯನ್ನು ಆಯೋಜಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ WWW.joinindianarmy.nic.in ( Agnipath) ವೆಬ್‌ಸೈಟ್ ಅಥವಾ ದೂರವಾಣಿ ಸಂಖ್ಯೆ ೦೮೩೮೨-೨೨೬೪೦೬, ೨೨೬೪೭೧, ೨೨೨೦೭೨ ಗೆ ಸಂಪರ್ಕಿಸುವಂತೆ ಎಂದು ಉತ್ತರಕನ್ನಡ ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
English summary :Agnipatha Recruitment Rally Starts From 1st September : Complete Details