ಗಾರ್ಲಿಕ್ ಮಶ್ರೂಮ್ | Janata news
ಬೆಂಗಳೂರು : ಬೇಗನೆ ಮಾಡಬಹುದಾದಂತಹ ಸ್ಪೆಷಲ್ ತಿಂಡಿ ಗಾರ್ಲಿಕ್ ಮಶ್ರೂಮ್.
ಬೇಕಾಗುವ ಸಾಮಾಗ್ರಿಗಳು :
ಮಶ್ರೂಮ್ 350 ಗ್ರಾಂ
ಬೆಣ್ಣೆ 1ಚಮಚ
ಸ್ಪ್ರಿಂಗ್ ಆನಿಯನ್ 1 ಚಮಚ
ತುಂಡರಿಸಿದ ಬೆಳ್ಳುಳ್ಳಿ 2 ಚಮಚ
ಹಸಿಮೆಣಸು 3
ಟೊಮ್ಯಾಟೊ ಪ್ಯೂರಿ 1 ಚಮಚ
ಕ್ರೀಂ 1 ಚಮಚ
ಕೊತ್ತಂಬರಿ ಸೊಪ್ಪು
ತಯಾರಿಸುವ ವಿಧಾನ :
ಒಂದು ಪ್ಯಾನ್ನಲ್ಲಿ ಬಟರ್ ಹಾಕಿ ಬಿಸಿಮಾಡಿ.
ನಂತರ ಅದಕ್ಕೆ ಸ್ಪ್ರಿಂಗ್ ಆನಿಯನ್, ಗಾರ್ಲಿಕ್ ಮತ್ತು ಹಸಿಮೆಣಸು ಹಾಕಿ ಹಸಿ ವಾಸನೆ ಹೋಗುವವರೆಗೂ (ಎರಡು ನಿಮಿಷ) ಫ್ರೈ ಮಾಡಿ.
ಬಟನ್ ಮಶ್ರೂಮ್ ಅರಿಶಿನ ಪುಡಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ತೊಳೆದು ಬೇಕಾದ ಆಕಾರಕ್ಕೆ ಕತ್ತರಿಸಿಟ್ಟುಕೊಳ್ಳಿ.
ಈಗ ಪ್ಯಾನ್ಗೆ ಮಶ್ರೂಮ್ ಹಾಕಿ 2 ನಿಮಿಷದವರೆಗೂ ಚೆನ್ನಾಗಿ ಬೇಯಿಸಿ.
ನಂತರ ಅದಕ್ಕೆ ಟೊಮ್ಯಾಟೊ ಪ್ಯೂರಿ ಮತ್ತು ಕ್ರೀಂ ಹಾಕಿ ಮಿಕ್ಸ್ ಮಾಡಿ.
ಎಲ್ಲವನ್ನೂ ಸಹ ಸರಿಯಾಗಿ ಮಿಕ್ಸ್ ಮಾಡಿ. ಮಶ್ರೂಮ್ಗೆ ಪ್ಯೂರಿ ಮತ್ತು ಕ್ರೀಂ ಸರಿಯಾಗಿ ಕೋಟ್ ಆಗುವಂತೆ ನೋಡಿಕೊಳ್ಳಿ.
ಇದೆಲ್ಲಾ ಆದ ಮೇಲೆ ಅದಕ್ಕೆ ಉಪ್ಪು ಮತ್ತು ಕರಿಮೆಣಸು ಹಾಕಿ.
ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ಸರಿಯಾಗಿ ಮಿಕ್ಸ್ ಮಾಡಿ. ಈಗ ಟೇಸ್ಟಿಯಾದ ಗಾರ್ಲಿಕ್ ಮಶ್ರೂಮ್ ಸವಿಯಲು ರೆಡಿ.