ಕೋಳಿ ತೆಂಗಿನ ಕಾಯಿ ಸುಕ್ಕ | Janata news
ಬೆಂಗಳೂರು : ಬೇಕಾಗುವ ಸಾಮಗ್ರಿಗಳು
ಕೋಳಿ - 1 ಕೆ.ಜಿ
ಈರುಳ್ಳಿ - 3ಸಣ್ಣಗೆ ಹೇಚ್ಚಿರೋದು
ಹಸಿಮೆಣಸಿನಕಾಯಿ - 2 ಸಣ್ಣಗೆ ಹೇಚ್ಚಿರೋದು
ಟೊಮೊಟೊ - 2
ಶುಂಟಿ-ಬೆಳ್ಳುಳ್ಳಿ ಪೇಸ್ಟ್ -1 ಟೀ ಚಮಚ
ಚಕ್ಕೆ - 1 ಇಂಚು
ಲವಂಗ - 4
ಏಲಕ್ಕಿ - 1
ದನಿಯ ಬೀಜ - 2 ಟೀ ಚಮಚ
ಮೆಂತೆ - 1/4 ಟೀ ಚಮಚ
ಜೀರಿಗೆ - 1 ಟೀ ಚಮಚ
ಅಚ್ಚಕಾರದ ಪುಡಿ - 4 ಟೀ ಚಮಚ
ಅರಿಸಿನ ಪುಡಿ
ಕರಿಬೇವಿನ ಸೊಪ್ಪು - 10 ಎಸಳು
ತೆಂಗಿನ ಕಾಯಿ -1
ಎಣ್ಣೆ/ತುಪ್ಪ - 2 ಟೇಬಲ್ ಚಮಚ
ಮಾಡುವ ವಿಧಾನ -
- ಒಂದು ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಚಕ್ಕೆ, ಲವಂಗ, ಏಲಕ್ಕಿ, ಜೀರಿಗೆ, ಮೆಂತೆ ಹಾಗೂ ದನಿಯ ಬೀಜವನ್ನು ಬೇರೆ ಬೇರೆಯಾಗಿ ಹುರಿದುಕೊಂಡು ಪುಡಿ ಮಾಡಿಕೊಳ್ಳಿ.
- ದಪ್ಪ ತಳದ ಅಗಲವಾದ ಪಾತ್ರೆ ಬಿಸಿಗಿಟ್ಟು, ಎಣ್ಣೆ / ತುಪ್ಪ ಹಾಕಿ ಕಾದ ನಂತರ ಹೆಚ್ಚಿದ ಈರುಳ್ಳಿ ಹಾಗು ಹಸಿಮೆಣಸಿನಕಾಯಿ ಹಾಕಿ ಬಾಡಿಸಿ.
- ನಂತರ ಹೆಚ್ಚಿದ ಟೊಮೋಟೊ ಹಾಕಿ ಬೇಯಿಸಿಕೊಳ್ಳಿ. ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿ.
- ಶುಚಿ ಮಾಡಿದ ಕೋಳಿಯನ್ನು ಹಾಕಿ ಉಪ್ಪು ಮತ್ತು ಅರಿಸಿನ ಪುಡಿ ಹಾಕಿ, ಕೋಳಿ ಬೆಂದಮೇಲೆ ಕಾರದ ಪುಡಿ, ಪುಡಿ ಮಾಡಿಟ್ಟುಕೊಂಡ ಚಕ್ಕೆ, ಲವಂಗ, ದನಿಯ, ಇವುಗಳ ಮಿಶ್ರಣ ಹಾಕಿದ ನಂತರ ಕರಿಬೇವಿನ ಎಸಳು ಹಾಕಿ ತಿರುಗಿಸಿ.
- 1 ಲೋಟ (ಮದ್ಯಮ ಗಾತ್ರ) ನೀರನ್ನು ಹಾಕಿ ಮಂದವಾದ ಉರಿಯಲ್ಲಿ ಬೇಯಲು ಬಿಡಿ.
- ಬಾಣಲೆಯನ್ನು ಬಿಸಿಗಿಟ್ಟು ಸಲ್ಪ ಎಣ್ಣೆ ಹಾಕಿ ತುರಿದ ತೆಂಗಿನಕಾಯನ್ನು ಹಾಕಿ ಚೆನ್ನಾಗಿ ಹುರಿಯಿರಿ. ಇದರಿಂದ ರುಚಿ ಹೆಚ್ಚುತ್ತೆ.
- ಬೆಂದ ಕೋಳಿಗೆ ಕಾಯಿಯನ್ನು ಹಾಕಿ ಚೆನ್ನಾಗಿ ಹುರಿಯಿರಿ.
ಈಗ ಕೋಳಿ ತೆಂಗಿನ ಕಾಯಿ ಸುಕ್ಕ ಸವೆಯಲು ಸಿದ್ದ, ಇಷ್ಟ ಆದ್ರೆ ನಮ್ಮ #SHARE & #LIKE ಮಾಡಿ