ಸಿಹಿ ಪೊಂಗಲ್ ತಯಾರಿಸುವ ಸರಳ ವಿಧಾನ.... | Janata news
ಬೆಂಗಳೂರು : ಜನತಾ ನ್ಯೂಸ್ ಓದುಗರಿಗೆ ಸಂಕ್ರಾತಿಯ ಶುಭಾಶಯಗಳು. ಸುಗ್ಗಿ ಹಬ್ಬವಾದ ಸಂಕ್ರಾಂತಿಗೆ ಎಳ್ಳು ಬೆಲ್ಲ, ಸಕ್ಕರೆ ಅಚ್ಛು ಮತ್ತು ಈ ಹುಗ್ಗಿ ಅಥವ ಪೊಂಗಲ್ ವಿಶೇಷ ವಾಗಿದೆ. ಆದ್ದರಿಂದ ನಿಮಗಾಗಿ ಸಿಹಿ ಪೊಂಗಲ್ ಮಾಡುವ ವಿಧಾನ ಇಂದು ತಿಳಿದುಕೊಳ್ಳೋಣ ....
ಬೇಕಾಗುವ ಸಾಮಗ್ರಿಗಳು:
* ಹೆಸರುಬೇಳೆ – 1 ಕಪ್
* ಅಕ್ಕಿ – 1 ಕಪ್
* ಪುಡಿ ಮಾಡಿದ ಬೆಲ್ಲ/ ಸಕ್ಕರೆ – 1 ಕಪ್
* ಏಲಕ್ಕಿ – 1 to 2
* ದ್ರಾಕ್ಷಿ ,ಗೋಡಂಬಿ- 50 ಗ್ರಾಂ
* ತುಪ್ಪ – 4 to 6 ಚಮಚ
* 1/4 cup ಕೊಬ್ಬರಿ ತುರಿ
ಮಾಡುವ ವಿಧಾನ:
* ಮೊದಲಿಗೆ ಒಂದು ಬಾಣಲೆಯಲ್ಲಿ ಹೆಸರುಬೇಳೆಯನ್ನು ಹಾಕಿ ಅದು ಕೆಂಪಾಗುವ ತನಕ ಕಡಿಮೆ ಉರಿಯಲ್ಲಿ ಹುರಿಯಿರಿ.
* ನಂತರ ಬೇಳೆ ಮತ್ತು ಅಕ್ಕಿಯನ್ನು ಚೆನ್ನಾಗಿ ತೊಳೆದು ಕುಕ್ಕರಿನಲ್ಲಿ ಮೂರರಿಂದ ನಾಲ್ಕು ಸಿಟಿ ಕೂಗಿಸಿ ಸ್ವಲ್ಪ ತಣ್ಣಗಾಗಲು ಬಿಡಿ.
* ಒಂದು ಚಮಚ ತುಪ್ಪವನ್ನು ಬಿಸಿ ಮಾಡಿ ಗೋಡಂಬಿ ಮತ್ತು ದ್ರಾಕ್ಷಿಯನ್ನು ಬೇರೆ ಬೇರೆಯಾಗಿ ಹುರಿದು ಇಟ್ಟುಕೊಳ್ಳಿ .
* ಮತ್ತೊಂದು ಪ್ಯಾನ್ ನಲ್ಲಿ ಪುಡಿಮಾಡಿದ ಬೆಲ್ಲ ಹಾಕಿ ಕರಗಿಸಿ ಅದನ್ನು ಸೋಸಿ ಕಸ ತೆಗೆದು ಇಟ್ಟುಕೊಳ್ಳಿ.
* ಸೋಸಿದ ಬೆಲ್ಲವನ್ನು ಒಂದು ದಪ್ಪ ತಳದ ಪಾತ್ರೆಯಲ್ಲಿ ಕುದಿಯಲು ಇಡಿ. ಗಟ್ಟಿಯಾದ ಮೇಲೆ ಅದಕ್ಕೆ ಬೆಂದ ಅಕ್ಕಿ ಬೇಳೆಯನ್ನು ಸ್ವಲ್ಪ ತುಪ್ಪದೊಂದಿಗೆ ಹಾಕಿ ಚೆನ್ನಗಿ ಕಲಕಿ 5 ನಿಮಿಷ ಸಣ್ಣ ಉರಿಯಲ್ಲಿ ಹಾಗೆ ಬೇಯಲು ಬಿಡಿ.
* ಈಗ ಕೊಬ್ಬರಿ, ಏಲಕ್ಕಿ ಪುಡಿಯನ್ನು ಹಾಕಿ ಕಲಕಿ ಸಣ್ಣ ಉರಿಯಲ್ಲಿ ಒಂದು ನಿಮಿಷ ಬೇಯಲು ಬಿಡಿ ನಂತರ ಒಲೆಯನ್ನು ಆರಿಸಿ.
* ಹುರಿದಿಟ್ಟ ದ್ರಾಕ್ಷಿ ಗೋಡಂಬಿಯನ್ನು ಹಾಕಿ ಕಲಸಿ, ಸಿಹಿ ಹುಗ್ಗಿಯನ್ನು ಬಿಸಿಯಾಗಿ ಸವಿಯಿರಿ.