ಪನ್ನೀರ್ ಕ್ಯಾಪ್ಸಿಕಂ ಮಸಾಲ ಮಾಡುವ ವಿಧಾನ ! | Janata news
ಬೆಂಗಳೂರು : ಬೇಕಾಗುವ ಸಾಮಗ್ರಿಗಳು:
- ಪನ್ನೀರ್ 200 ಗ್ರಾಂ
- ಕ್ಯಾಪ್ಸಿಕಂ 1
- ಈರುಳ್ಳಿ 1
- ಟೊಮೇಟೊ 3
- ಹಸಿಮೆಣಸಿನಕಾಯಿ 2
- ಒಣ ಮೆಣಸಿನ ಪೌಡರ್ 1 ಚಮಚ
- ಜಿರಗೆ 1 ಚಮಚ
- ಸೋಂಪು 1 ಚಮಚ
- ಧನಿಯಾ 1 ಚಮಚ
- ಗರಂ ಮಸಾಲ 1 ಚಮಚ
- ಎಣ್ಣೆ / ತುಪ್ಪ ನಾಲ್ಕು ಚಮಚ
- ಉಪ್ಪು ರುಚಿಗೆ
- ಕಸೂರಿ ಮೆಥಿ ಸ್ವಲ್ಪ
ಮಾಡುವ ವಿಧಾನ:
- ಮೊದಲು ಬಾಣಲೆಗೆ ಸೋಂಪು,ಧನಿಯಾ, ಮೆಣಸು, ಜಿರಗೆ ಎಲ್ಲವನ್ನು ಹಾಗೆ ಹುರಿದು, ಮಿಕ್ಸಿ ಗೆ ಹಾಕಿ ಪುಡಿ ಮಾಡಿಕೊಳ್ಳಿ
- ಆಮೇಲೆ ಬಾಣಲಗೆ ಎಣ್ಣೆ ಹಾಕಿ ಪನ್ನೀರ್ ಕ್ಯಾಪ್ಸಿಕಂ ಬೇರೆ ಬೇರೆಯಾಗಿ ಹುರಿದುಕೊಳ್ಳಿ, ನಂತ್ರ ಒಂದು ಪ್ಲೇಟ್ ನಲ್ಲಿ ತೆಗೆದಿಡಿ.
- ಆಮೇಲೆ ಅದೇ ಬಾಣಲೆಯಲ್ಲಿ ಕ್ಯಾಚಿಕ್ಕಿದಾಗಿ ಹೆಚ್ಚಿದ ಈರುಳ್ಳಿ ಹಾಕಿ, ಸರಿಯಾಗಿ ಫ್ರೈ ಆದಮೇಲೆ ಟೊಮೇಟೊ ಬಾಣಲೆಗೆ ಎಣ್ಣೆ ಹಾಕಿ ಸರಿಯಾಗಿ ಹುರಿದುಕೊಳ್ಳಿ
- ನಂತರ ಮೆಣಸಿನಕಾಯಿ ಹಾಕಿ ಹುರಿದು ಇದಕ್ಕೆ ಪುಡಿ ಮಾಡಿದ ಮಿಶ್ರಣ ಹಾಕಿ ಸರಿಯಾಗಿ ಕೈಯಾಡಿಸಿ.
- ನಂತರ ಇದಕ್ಕೆ ಹುರಿದ ಕ್ಯಾಪ್ಸಿಕಂ ಮತ್ತು ಪನ್ನೀರ್ ಹಾಕಿ ಸರಿಯಾಗಿ ಕೈಯಾಡಿಸಿ ಸ್ವಲ್ಪ ಹೊತ್ತು ಹಾಗೆ ಕೈಯಾಡಿಸಿ.
- ರುಚಿಗೆ ತಕ್ಕಸ್ಟು ಉಪ್ಪು, ಕುಟಂಬರಿ ಸೊಪ್ಪು, ಸ್ವಲ್ಪ ಕಸೂರಿ ಮೆಥಿ ಹಾಕಿ ಕೈಯಾಡಿಸಿ, ಸಣ್ಣ ಉರಿಯಲ್ಲಿ ಐದು ನಿಮಿಷ ಇಡಿ.
ರುಚಿಯಾದ ಪನ್ನೀರ್ ಕ್ಯಾಪ್ಸಿಕಂ ಸವಿಯಲು ಸಿದ್ದ.