ಗಣೇಶ ಹಬ್ಬದ ಪ್ರಯುಕ್ತ ಕರ್ಜಿಕಾಯಿ / ಕರಿಗಡುಬು ಮಾಡುವ ವಿಧಾನ! | Janata news
ಬೆಂಗಳೂರು : ಮಾಡುವ ವಿಧಾನ :
- ಮೊದಲು ಒಂದು ಪಾತ್ರೆಗೆ 1 ಕಪ್ ಮೈದಾ ಹಿಟ್ಟು ಅಥವಾ ಗೋದಿ ಹಿಟ್ಟು, ಅರ್ಧ ಕಪ್ ಚಿರೋಟಿ ರವೆ, ಒಂದು ಚಿಟಿಕೆ ಉಪ್ಪು, 1 ಸ್ಪೂನ್ ಸಕ್ಕರೆ ಪುಡಿ ಸೇರಿಸಿ 2 ಸ್ಪೂನ್ ತುಪ್ಪ / ಎಣ್ಣೆ ಹಾಕಿ ಮಿಕ್ಸ್ ಮಾಡಿ ಚಪಾತಿ ಹಿಟ್ಟಿನ ಹದಕ್ಕೆ ನೀರು ಅಥವಾ ಹಾಲು ಸೇರಿಸಿ ಹಿಟ್ಟನ್ನ ಚಪಾತಿ ಹಿಟ್ಟಿನ ಹದದಲ್ಲಿ ಕಲೆಸಿ 1 ಗಂಟೆ ಮುಚ್ಚಿಡಿ.
ಹೂರಣ:
- 1 ಕಪ್ ಒಣ ಕೊಬ್ಬರಿತುರಿ ಅಥವಾ ಕಾಯೀತುರಿ, 3/4 ಕಪ್ ಬೆಲ್ಲದ ಅಥವಾ ಸಕ್ಕರೆ ಪುಡಿ ಹಾಕಿ , ಸ್ವಲ್ಪ ಏಲಕ್ಕಿ ಪುಡಿ, ಸ್ವಲ್ಪ ನೀರು ಹಾಕಿ , ಬಂಡಿಯಲ್ಲಿ ಹಾಕಿ ಚೆನ್ನಾಗಿ ತಿರುಗಿಸಿ ಕಾಯಿಸಿ ಉಂಡೆ ಕಟ್ಟುವ ಹದ ಬರಬೇಕು ಹಾಗೆ ಮಾಡಿಕೊಳ್ಳಿ ನಂತರ ಸ್ವಲ್ಪ ಗಸಗಸೆ ಯನ್ನು ಹುರಿದು ಹಾಕಿ ಅಥವಾ ಹುರಿದಿರುವ ಯಳ್ಳು ಹಾಕಿ ಈ ಹುರಣಕ್ಕೆ ಹಾಕಿ ಸೇರಿಸಿ ತಿರುಗಿಸಿ ಹುರಣ ರೆಡಿ .
optinal ಕಾಲು ಕಪ್ ಗೋಡಂಬಿ, ಬಾದಾಮಿ ಫ್ರೈ ಮಾಡಿ ಹಾಕಿ.
- ಮೈದಾ ಹಿಟ್ಟನ್ನು ಪುರಿಯಂತೆ ಒತ್ತಿ ಅದಕ್ಕೆ 2 ಸ್ಪೂನ್ ಹೂರಣ ಇಟ್ಟು ಕರ್ಜಿಕಾಯಿ ಮೌಲ್ಡ್ ನಲ್ಲಿ ಪ್ರೆಸ್ ಮಾಡಿ
- ನಂತರ ಬಾಂಡಲಿ ಇಟ್ಟು ಅಡುಗೆ ಎಣ್ಣೆ ಹಾಕಿ ಬಿಸಿ ಅದ ನಂತರ ಒಂದೊಂದೇ ಬಂಡಿಗೆ (ಬಾಂಡಲಿಗೆ )ಹಾಕಿ ಕರಿಯಿರಿ (ಬೇಯಿಸಿರಿ ) ೨ ಕಡೆ ತಿರುಗಿಸಿ ಬೇಯಿಸಿ.
ಈಗ ಸವಿ ಸವಿ ಕರ್ಜಿಕಾಯಿ ರೆಡಿ .